alex Certify
ಕನ್ನಡ ದುನಿಯಾ       Mobile App
       

Kannada Duniya

ಎ.ಬಿ.ಡಿ. ಅಬ್ಬರಿಸಿದ್ರೂ ಆರ್.ಸಿ.ಬಿ. ಗೆ ಸೋಲು

rcb-nm

ಇಂಧೋರ್: ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಎ.ಬಿ. ಡಿ’ವಿಲಿಯರ್ಸ್ ಅಬ್ಬರದ ಆಟವಾಡಿದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿದೆ.

ಕಿಂಗ್ಸ್ ಇಲೆವನ್ ಪಂಜಾಬ್ ಇನ್ನೂ 5.3 ಓವರ್ ಗಳು ಬಾಕಿ ಇರುವಾಗಲೇ ಜಯಗಳಿಸಿದೆ. ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆರ್.ಸಿ.ಬಿ. ಪರವಾಗಿ ಡಿ’ವಿಲಿಯರ್ಸ್ 46 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿದರು.

15 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದ್ದ ಆರ್.ಸಿ.ಬಿ., ಡಿ’ವಿಲಿಯರ್ಸ್ ಆಟದ ನೆರವಿನಿಂದ ಕೊನೆಯ 5 ಓವರ್ ಗಳಲ್ಲಿ 77 ರನ್ ಕಲೆ ಹಾಕಿತು.

ನಿಗದಿತ 20 ಓವರ್ ಗಳಲ್ಲಿ 148 ರನ್ ಗಳಿಸಿದ ಆರ್.ಸಿ.ಬಿ. 149 ರನ್ ಗೆಲುವಿನ ಗುರಿಯನ್ನು ಪಂಜಾಬ್ ತಂಡಕ್ಕೆ ನೀಡಿತು.

ಆಶಿಮ್ ಆಮ್ಲ 58, ಗ್ಲೆನ್ ಮ್ಯಾಕ್ಸ್ ವೆಲ್ ಅಜೇಯ 43 ಅವರ ಅಮೋಘ ಆಟದ ನೆರವಿನಿಂದ ಪಂಜಾಬ್ ಭರ್ಜರಿ ಜಯ ಗಳಿಸಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...