alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಯಾಮ್ಸನ್ ಶತಕದ ಅಬ್ಬರಕ್ಕೆ ಪುಣೆಗೆ ಸೋಲು

nju-sam

ಪುಣೆ: ಸಂಜು ಸ್ಯಾಮ್ಸನ್ ಸಿಡಿಸಿದ ಶತಕದ ಅಬ್ಬರಕ್ಕೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮಂಕಾಗಿದೆ.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಭರ್ಜರಿ ಜಯಗಳಿಸಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 205 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು.

ಸ್ಯಾಮ್ ಬಿಲಿಂಗ್ಸ್ 24, ಸಂಜು ಸ್ಯಾಮ್ಸನ್ 102, ರಿಶಬ್ ಪಂತ್ 31, ಕ್ರಿಸ್ ಮೊರಿಸ್ 38 ರನ್ ಗಳಿಸಿದ್ದಾರೆ. 63 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ನೆರವಿನಿಂದ 102 ರನ್ ಗಳಿಸಿದ ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

206 ಗೆಲುವಿನ ಗುರಿ ಬೆನ್ನತ್ತಿದ ಪುಣೆ 16.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 97 ರನ್ ಅಂತರದಿಂದ ಸೋಲು ಕಂಡಿದೆ.

ಅಜಿಂಕ್ಯಾ ರೆಹಾನೆ 10, ಮಯಾಂಕ್ ಅಗರ್ ವಾಲ್ 20, ರಾಹುಲ್ ತ್ರಿಪಾಠಿ 10, ಎಂ.ಎಸ್. ಧೋನಿ 11 ರನ್ ಗಳಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...