alex Certify
ಕನ್ನಡ ದುನಿಯಾ       Mobile App
       

Kannada Duniya

IPL : ಮುಂಬೈ –ಪುಣೆ ಹೈ ವೋಲ್ಟೇಜ್ ಮ್ಯಾಚ್

pune-d

ಹೈದರಾಬಾದ್: ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐ.ಪಿ.ಎಲ್. ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಡಲಿವೆ.

ಪ್ರಸಕ್ತ ಐ.ಪಿ.ಎಲ್. ಟೂರ್ನಿಯಲ್ಲಿ ಇವೆರಡೂ ತಂಡಗಳು 3 ಸಲ ಮುಖಾಮುಖಿಯಾಗಿದ್ದು, ಮೂರೂ ಬಾರಿಯೂ ಪುಣೆ ಜಯಗಳಿಸಿದೆ.

ಏಪ್ರಿಲ್ 6 ರಂದು ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಪುಣೆ ತಂಡ 7 ವಿಕೆಟ್ ಅಂತರದಿಂದ ಜಯಗಳಿಸಿತ್ತು. ಏಪ್ರಿಲ್ 24 ರಂದು ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಪುಣೆ 3 ರನ್ ಅಂತರದಿಂದ ಗೆದ್ದಿತ್ತು. ಅದೇ ರೀತಿ ಕ್ವಾಲಿಫೈಯರ್ ಪಂದ್ಯದಲ್ಲೂ 20 ರನ್ ಅಂತರದ ಜಯಗಳಿಸಿ ಫೈನಲ್ ಪ್ರವೇಶಿಸಿತ್ತು.

ಈಗ 4 ನೇ ಬಾರಿಗೆ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ವಿಜೇತ ತಂಡಕ್ಕೆ ಐ.ಪಿ.ಎಲ್. -10 ಟ್ರೋಫಿ ಸಿಗಲಿದೆ.

ಉಭಯ ತಂಡಗಳು ಗೆಲುವಿಗಾಗಿ ಇನ್ನಿಲ್ಲದ ಕಾರ್ಯತಂತ್ರ ರೂಪಿಸಿದ್ದು, ಹೈ ವೋಲ್ಟೇಜ್ ಮ್ಯಾಚ್ ಗೆ ಹೈದರಾಬಾದ್ ಸ್ಟೇಡಿಯಂ ಸಜ್ಜಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...