alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ವಿರುದ್ಧ ಪುಣೆಗೆ ಭರ್ಜರಿ ಗೆಲುವು

mum-pune

ಪುಣೆ: ಮುಂಬೈ ಇಂಡಿಯನ್ಸ್ ನೀಡಿದ್ದ ಸವಾಲಿನ ಮೊತ್ತವನ್ನು ಕೊನೆಯ ಓವರ್ ನಲ್ಲಿ ಗಳಿಸುವ ಮೂಲಕ ಪುಣೆ ಸೂಪರ್ ಜೈಂಟ್ಸ್ ಭರ್ಜರಿ ಜಯಗಳಿಸಿದೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿ ಮುಂಬೈ ಇಂಡಿಯನ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.

ಪಾರ್ಥಿವ್ ಪಟೇಲ್ 19, ಜೋಸ್ ಬಟ್ಲರ್ 38, ನಿತೀಶ್ ರಾಣಾ 34, ಕೀರನ್ ಪೋಲಾರ್ಡ್ 27, ಹಾರ್ದಿಕ್ ಪಾಂಡ್ಯ ಅಜೇಯ 35 ರನ್ ಗಳಿಸಿದ್ದಾರೆ.

185 ರನ್ ಗೆಲುವಿನ ಗುರಿ ಬೆನ್ನತ್ತಿದ ಪುಣೆ ಇನ್ನೊಂದು ಎಸೆತ ಬಾಕಿ ಇರುವಾಗಲೇ 187 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಪುಣೆ ತಂಡದ ಪರವಾಗಿ, ಸ್ಟೀವನ್ ಸ್ಮಿತ್ 54 ಎಸೆತಗಳಲ್ಲಿ 3 ಸಿಕ್ಸರ್, 7 ಬೌಂಡರಿ ಸೇರಿದಂತೆ ಅಜೇಯ 84 ರನ್ ಗಳಿಸಿದರೆ, ಅಜಿಂಕ್ಯಾ ರೆಹಾನೆ 60 ಗಳಿಸಿದರು.

ಮೊದಲ ಪಂದ್ಯದಲ್ಲಿಯೇ ಭರ್ಜರಿ ಜಯದೊಂದಿಗೆ ಪುಣೆ ತಂಡ ಶುಭಾರಂಭ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...