alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈನಲ್ಲಿ ಸನ್ ರೈಸರ್ಸ್ ಗೆ ಸೋಲಿನ ರುಚಿ

um-sun-ipl

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ಪ್ರದರ್ಶನ ನೀಡಿ, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಹೈದರಾಬಾದ್ ತಂಡದ ಪರವಾಗಿ ಶಿಖರ್ ಧವನ್ 48, ವಾರ್ನರ್ 49, ದೀಪಕ್ ಹೂಡ 9, ಯುವರಾಜ್ ಸಿಂಗ್ 5, ಬೆನ್ ಕಟಿಂಗ್ 20 ರನ್ ಗಳಿಸಿದ್ದಾರೆ. ಮುಂಬೈ ಪರವಾಗಿ ಜಸ್ ಪ್ರೀತ್ ಬೂಮ್ರಾ 3 ವಿಕೆಟ್, ಹರ್ಭಜನ್ ಸಿಂಗ್ 2 ವಿಕೆಟ್ ಪಡೆದರು.

20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದ ಹೈದರಾಬಾದ್, ಮುಂಬೈಗೆ 159 ರನ್ ಗೆಲುವಿನ ಗುರಿ ನೀಡಿತು.

ನಿತೀಶ್ ರಾಣಾ 45, ಪಾರ್ಥಿವ್ ಪಟೇಲ್ 39, ಕೃನಾಲ್ ಪಾಂಡ್ಯ 37 ರನ್ ಗಳಿಸಿ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನು 8 ಎಸೆತ ಬಾಕಿ ಉಳಿದಿರುವಂತೆಯೇ ಮುಂಬೈ 6 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...