alex Certify
ಕನ್ನಡ ದುನಿಯಾ       Mobile App
       

Kannada Duniya

‘ಟೈ’ ಪಂದ್ಯದಲ್ಲಿ ಮುಂಬೈಗೆ ‘ಸೂಪರ್’ ಗೆಲುವು

mi-ipl

ರಾಜ್ ಕೋಟ್: ‘ಟೈ’ ಆಗಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜಯ ಗಳಿಸುವ ಮೂಲಕ ನಾಕ್ ಔಟ್ ಗೆ ಹತ್ತಿರವಾಗಿದೆ.

ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಗುಜರಾತ್ ಲಯನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ.

ಈ ಪಂದ್ಯ ಹಲವು ನಾಟಕೀಯ ತಿರುವು ಪಡೆದು ‘ಟೈ’ನಲ್ಲಿ ಅಂತ್ಯವಾಗಿದ್ದರಿಂದ ಸೂಪರ್ ಓವರ್ ಮೊರೆ ಹೋಗಲಾಗಿದೆ.

ಈ ಸೂಪರ್ ಓವರ್ ನಲ್ಲಿ ಮುಂಬೈ ಇಂಡಿಯನ್ಸ್ 2 ವಿಕೆಟ್ ಗೆ 11 ರನ್ ಗಳಿಸಿದರೆ, ಗುಜರಾತ್ ಲಯನ್ಸ್ ವಿಕೆಟ್ ನಷ್ಟವಿಲ್ಲದೇ ಕೇವಲ 6 ರನ್ ಗಳಿಸಿದೆ.

ಮೊದಲಿಗೆ ಬ್ಯಾಟಿಂಗ್ ನಡೆಸಿದ ಗುಜರಾತ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ. ಇಶಾನ್ ಕಿಶನ್ 48, ರವೀಂದ್ರ ಜಡೇಜ 28, ರನ್ ಗಳಿಸಿದರೆ, ಮುಂಬೈ ಪರ ಲಸಿತ್ ಮಾಲಿಂಗ 2, ಜಸ್ ಪ್ರೀತ್ ಬೂಮ್ರ 2, ಪಾಂಡ್ಯಾ 3 ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್ ಗೆಲುವಿನ ಗುರಿ ಬೆನ್ನತ್ತಿ, 20 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು. ಪಾರ್ಥಿವ್ ಪಟೇಲ್ 70, ನಿತೀಶ್ ರಾಣಾ 19, ಕೃನಾಲ್ ಪಾಂಡ್ಯ ಅಜೇಯ 19 ರನ್ ಗಳಿಸಿದ್ದಾರೆ.

ಗುಜರಾತ್ ಪರವಾಗಿ ಬಸಿಲ್ ಥಂಪಿ 3, ಫಾಲ್ಕನರ್ 2 ವಿಕೆಟ್ ಪಡೆದರು. ಸೂಪರ್ ಓವರ್ ನಲ್ಲಿ ಮುಂಬೈ ಇಂಡಿಯನ್ಸ್ ಜಯಗಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...