alex Certify
ಕನ್ನಡ ದುನಿಯಾ       Mobile App
       

Kannada Duniya

IPL ಫೈನಲ್ ನಲ್ಲಿ ದಾಖಲೆ ಬರೆದ ಎಂ.ಎಸ್. ಧೋನಿ

doni-ms-s

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಫೈನಲ್ ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ಹೊಸ ದಾಖಲೆ ಬರೆದಿದ್ದಾರೆ.

7 ಬಾರಿಗೆ ಐ.ಪಿ.ಎಲ್. ಟೂರ್ನಿಯ ಫೈನಲ್ ನಲ್ಲಿ ಆಡುವ ಮೂಲಕ ಮಹೇಂದ್ರ ಸಿಂಗ್ ಧೋನಿ ದಾಖಲೆ ಮಾಡಿದ್ದಾರೆ. ಕಳೆದ 2 ಆವೃತ್ತಿಗಳಲ್ಲಿ ಅವರು ಪುಣೆ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಅದಕ್ಕಿಂತ ಹಿಂದಿನ 8 ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದ ಧೋನಿ 2008, 2010, 2011, 2012, 2013 ಹಾಗೂ 2015 ರಲ್ಲಿ ಐ.ಪಿ.ಎಲ್. ಫೈನಲ್ ನಲ್ಲಿ ಆಡಿದ್ದರು.

ಚೆನ್ನೈ ತಂಡದ ಮೇಲೆ ನಿಷೇಧ ಹೇರಿದ್ದರಿಂದ ಪುಣೆ ತಂಡವನ್ನು ಸೇರಿಕೊಂಡು ನಾಯಕರಾಗಿದ್ದರು. ಈ ಆವೃತ್ತಿಯಲ್ಲಿ ನಾಯಕನ ಸ್ಥಾನ ಕಳೆದುಕೊಂಡಿದ್ದರು.

ಈಗ ಪುಣೆ ತಂಡದ ಪರ ಫೈನಲ್ ಆಡಿದ್ದಾರೆ. ಈ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಫೈನಲ್ ಪಂದ್ಯದಲ್ಲಿ ಅಭಿಮಾನಿಗಳು ಧೋನಿಯ ಆಟವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದರು. ಆದರೆ ಅವರು 10 ರನ್ ಗಳಿಸಿ ಔಟಾದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...