alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಜಾಬ್ ವಿರುದ್ಧ ಕೆ.ಕೆ.ಆರ್.ಗೆ ಭರ್ಜರಿ ಜಯ

kkr-ipl

ಕೋಲ್ಕೊತಾ: ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ, ಐ.ಪಿ.ಎಲ್. ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ಧ ಕೋಲ್ಕೊತಾ ನೈಟ್ ರೈಡರ್ಸ್ 8 ವಿಕೆಟ್ ಅಂತರದಿಂದ ಭರ್ಜರಿ ಜಯಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಆಮ್ಲಾ 25, ಮನನ್ ವೊರಾ 28, ಗ್ಲೆನ್ ಮ್ಯಾಕ್ಸ್ ವೆಲ್ 25, ಡೇವಿಡ್ ಮಿಲ್ಲರ್ 28, ವೃದ್ಧಿಮಾನ್ ಸಹಾ 25 ರನ್ ಗಳಿಸಿದ್ದಾರೆ. ಕೋಲ್ಕತಾ ಪರವಾಗಿ ಉಮೇಶ್ ಯಾದವ್ 4 ವಿಕೆಟ್ ಪಡೆದು ಗಮನಸೆಳೆದರು.

171 ರನ್ ಗೆಲುವಿನ ಗುರಿ ಪಡೆದ ಕೋಲ್ಕೊತಾ ತಂಡ 16.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಗಳಿಸಿದೆ. ಗೌತಮ್ ಗಂಭೀರ್ 49 ಎಸೆತಗಳಲ್ಲಿ 11 ಬೌಂಡರಿ ಒಳಗೊಂಡ 72 ರನ್ ಗಳಿಸಿ ಅಜೇಯರಾಗುಳಿದರು. ನರೇನ್ 37, ರಾಬಿನ್ ಉತ್ತಪ್ಪ 26, ಮನೀಶ್ ಪಾಂಡೆ ಅಜೇಯ 25 ರನ್ ಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...