alex Certify
ಕನ್ನಡ ದುನಿಯಾ       Mobile App
       

Kannada Duniya

ಲಯನ್ಸ್ ವಿರುದ್ಧ ಕೆ.ಕೆ.ಆರ್.ಗೆ ನೋ ಲಾಸ್ ಗೆಲುವು

ipl

ರಾಜ್ ಕೋಟ್: ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ, ಗುಜರಾತ್ ಲಯನ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಭರ್ಜರಿ ಜಯಗಳಿಸಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಗುಜರಾತ್ ಲಯನ್ಸ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿದೆ.

ಸುರೇಶ್ ರೈನಾ ಅಜೇಯ 68, ಮೆಕಲ್ಲಮ್ 35, ದಿನೇಶ್ ಕಾರ್ತಿಕ್ 47 ರನ್ ಗಳಿಸಿದ್ದಾರೆ. 184 ಗೆಲುವಿನ ಗುರಿ ಪಡೆದ ಕೋಲ್ಕತಾ ನೋ ಲಾಸ್ ಗೆಲುವು ಪಡೆದಿದೆ.

ತಂಡದ ಪರವಾಗಿ ಅಮೋಘ ಪ್ರದರ್ಶನ ನೀಡಿದ ಗೌತಮ್ ಗಂಭೀರ್ 48 ಎಸೆತಗಳಲ್ಲಿ 12 ಬೌಂಡರಿ ಒಳಗೊಂಡ 76 ರನ್ ಗಳಿಸಿದರೆ, ಕ್ರಿಸ್ ಲಿನ್ 41 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್ ನೆರವಿನಿಂದ 93 ರನ್ ಗಳಿಸಿದ್ದಾರೆ.

ಇನ್ನು 5.1 ಓವರ್ ಬಾಕಿ ಇರುವಂತೆಯೇ ಕೋಲ್ಕತಾ ತಂಡ ವಿಕೆಟ್ ನಷ್ಟವಿಲ್ಲದೇ ಗೆಲುವು ಪಡೆಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...