alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ತ್ರಿಪಾಠಿ ಅಬ್ಬರಕ್ಕೆ ತವರಲ್ಲೇ ಸೋತ ಕೆ.ಕೆ.ಆರ್.

rahul-tripa

ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸೋಲು ಕಂಡಿದೆ.

ರಾಹುಲ್ ತ್ರಿಪಾಠಿ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಭರ್ಜರಿ ಜಯಗಳಿಸಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಕೆ.ಕೆ.ಆರ್. ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿದೆ.

ಗೌತಮ್ ಗಂಭೀರ್ 24, ಗ್ರಾಂಡ್ ಹೋಂ 36, ಮನೀಶ್ ಪಾಂಡೆ 37, ಸೂರ್ಯಕುಮಾರ್ 30 ರನ್ ಗಳಿಸಿದರು. 156 ರನ್ ಗುರಿಯನ್ನು ಬೆನ್ನತ್ತಿದ್ದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಇನ್ನೂ 4 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ರಾಹುಲ್ ತ್ರಿಪಾಠಿ 52 ಎಸೆತಗಳಲ್ಲಿ 9 ಬೌಂಡರಿ, 7 ಸಿಕ್ಸರ್ ನೆರವಿನಿಂದ 93 ರನ್ ಗಳಿಸಿದ್ದಾರೆ. ಪುಣೆ ತಂಡ ಆಡಿದ 11 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಸಾಧಿಸಿದ್ದು, 14 ಅಂಕಗಳಿಸಿ ಅಂಕಪಟ್ಟಿಯಲ್ಲಿ 3 ನೇ ಸ್ಥಾನಕ್ಕೇರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...