alex Certify
ಕನ್ನಡ ದುನಿಯಾ       Mobile App
       

Kannada Duniya

ಕೆ.ಕೆ.ಆರ್. ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

kingss-pun

ಮೊಹಾಲಿ: ಇಲ್ಲಿನ ಐ.ಎಸ್. ಬಿಂದ್ರಾ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ 14 ರನ್ ಗಳ ಅಂತರದಿಂದ ರೋಚಕ ಜಯ ಗಳಿಸಿದೆ.

ಗೆಲುವಿಗೆ 168 ರನ್ ಗಳ ಗುರಿ ಪಡೆದ ಕೋಲ್ಕತ್ತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 153 ರನ್ ಗಳಿಸಲಷ್ಟೇ ಶಕ್ತವಾಯಿತು.

ಮೊದಲಿಗೆ ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಮಾರ್ಟಿನ್ ಗುಪ್ಟಿಲ್ 12, ಮನನ್ ವೊಹ್ರಾ 25, ಶಾನ್ ಮಾರ್ಷ್ 11, ವೃದ್ಧಿಮಾನ್ ಸಹಾ 38, ಗ್ಲೆನ್ ಮ್ಯಾಕ್ಸ್ ವೆಲ್ 44 ರಾಹುಲ್ ತೆವಾಟಿಯಾ 15 ರನ್ ಗಳಿಸಿದ್ದಾರೆ.

ಕೆ.ಕೆ.ಆರ್. ಪರವಾಗಿ ಕ್ರಿಸ್ ವೀಕ್ಸ್ 2, ಕುಲದೀಪ್ ಯಾದವ್ 2 ವಿಕೆಟ್ ಪಡೆದಿದ್ದಾರೆ. 168 ಗೆಲುವಿನ ಗುರಿ ಪಡೆದ ಕೆ.ಕೆ.ಆರ್. ಪರ ಕ್ರಿಸ್ ಲಿನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 84 ರನ್ ಗಳಿಸಿದ ಅವರ ಹೋರಾಟ ವ್ಯರ್ಥವಾಗಿದೆ.

ಸುನಿಲ್ ನರೈನ್ 18, ಮನೀಶ್ ಪಾಂಡೆ 18 ರನ್ ಗಳಿಸಿದ್ದಾರೆ. ಪಂಜಾಬ್ ಪರ ಮೋಹಿತ್ ಶರ್ಮ, ರಾಹುಲ್ ತಲಾ 2 ವಿಕೆಟ್ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...