alex Certify
ಕನ್ನಡ ದುನಿಯಾ       Mobile App
       

Kannada Duniya

ಲಯನ್ಸ್ ಮಣಿಸಿದ ಪಂಜಾಬ್ ಕಿಂಗ್ಸ್

punjab

ರಾಜ್ ಕೋಟ್: ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ, ಐ.ಪಿ.ಎಲ್. ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ 26 ರನ್ ಗಳ ಅಂತರದ ಜಯ ಗಳಿಸಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ, ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಹಾಶೀಮ್ ಆಮ್ಲ 65, ಶಾನ್ ಮಾರ್ಷ್ 30, ಮ್ಯಾಕ್ಸ್ ವೆಲ್ 31, ಅಕ್ಷರ್ ಪಟೇಲ್ 34 ರನ್ ಗಳಿಸಿದರು.

189 ರನ್ ಗೆಲುವಿನ ಗುರಿ ಪಡೆದ ಗುಜರಾತ್ ತಂಡ ಪಂಜಾಬ್ ಬೌಲರ್ ಗಳ ದಾಳಿಗೆ ಮಂಕಾಯಿತು. ನಿಗದಿತ ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿ, ಸೋಲು ಕಂಡಿತು.

ಆ್ಯರನ್ ಪಿಂಚ್ 13, ಸುರೇಶ್ ರೈನಾ 32, ರವೀಂದ್ರ ಜಡೇಜ 9, ದಿನೇಶ್ ಕಾರ್ತಿಕ್ ಅಜೇಯ 58 ರನ್ ಗಳಿಸಿದರು. ಪಂಜಾಬ್ ಪರವಾಗಿ ಸಂದೀಪ್ ಶರ್ಮ, ಅಕ್ಷರ್ ಪಟೇಲ್ ಹಾಗೂ ಕೆ.ಸಿ. ಕರಿಯಪ್ಪ ತಲಾ 2 ವಿಕೆಟ್ ಪಡೆದರೆ, ಮೋಹಿತ್ ಶರ್ಮ 1 ವಿಕೆಟ್ ಗಳಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...