alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡಿಗರ ಕಮಾಲ್! ಡೆಲ್ಲಿ ಬಗ್ಗು ಬಡಿದ ಪಂಜಾಬ್ ಕಿಂಗ್ಸ್

ಮೊಹಾಲಿ: ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ನ ಐ.ಎಸ್. ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ 6 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ.

ಕನ್ನಡಿಗರಾದ ಕೆ.ಎಲ್. ರಾಹುಲ್, ಕರುಣ್ ನಾಯರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರಾಹುಲ್ 16 ಎಸೆತಗಳಲ್ಲಿ 51 ರನ್ ಗಳಿಸಿದ್ದು, ಕರುಣ್ ನಾಯರ್ 33 ಎಸೆತಗಳಲ್ಲಿ 50 ರನ್ ಸಿಡಿಸಿದ್ದಾರೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದೆ.

ಗೌತಮ್ ಗಂಭೀರ್ 55, ರಿಶಬ್ ಪಂತ್ 28, ಕ್ರಿಸ್ ಮೊರಿಸ್ ಅಜೇಯ 27 ರನ್ ಗಳಿಸಿದ್ದು, ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರವಾಗಿ ಮೊಹಿತ್ ಶರ್ಮಾ, ಮುಜಿಬುರ್ ರೆಹಮಾನ್ ತಲಾ 2 ವಿಕೆಟ್ ಪಡೆದಿದ್ದಾರೆ.

167 ರನ್ ಗೆಲುವಿನ ಗುರಿ ಪಡೆದ ಪಂಜಾಬ್ ಪರವಾಗಿ ಕೆ.ಎಲ್. ರಾಹುಲ್ ದಾಖಲೆಯ ಅರ್ಧ ಶತಕ ಗಳಿಸಿದ್ದಾರೆ. 16 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಒಳಗೊಂಡ 51 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಯುವರಾಜ್ ಸಿಂಗ್ 12. ಕರುಣ್ ನಾಯರ್ 50, ಡೇವಿಡ್ ಮಿಲ್ಲರ್ ಅಜೇಯ 24, ಮಾರ್ಕಸ್ ಸ್ಟೊನಿಯಸ್ ಅಜೇಯ 22 ರನ್ ಗಳಿಸಿದ್ದಾರೆ.

18.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಗೆಲುವು ಕಂಡ ಪಂಜಾಬ್ ತನ್ನ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...