alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶದಲ್ಲಿ ಮುಂದಿನ ಐಪಿಎಲ್ ಪಂದ್ಯಾವಳಿ

ipl-logo

ನವದೆಹಲಿ: ದೇಶದ ಬಹುತೇಕ ಕಡೆಗಳಲ್ಲಿ ಆವರಿಸಿರುವ ಬರದ ಛಾಯೆ ಜನರನ್ನು ಕಂಗಾಲಾಗಿಸಿದೆ. ಕುಡಿಯುವ ನೀರಿಗೆ ಜನ, ಜಾನುವಾರು ಪರಿತಪಿಸುವಂತಾಗಿದೆ. ಇಂತಹ ಬರದ ಬಿಸಿ ಐಪಿಎಲ್ ಪಂದ್ಯಾವಳಿಗೂ ತಟ್ಟಿದೆ. ಇದರಿಂದಾಗಿ ಐಪಿಎಲ್ 10ನೇ ಆವೃತ್ತಿ ವಿದೇಶದಲ್ಲಿ ನಡೆಯಲಿದೆ.

ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಈ ವಿಷಯ ತಿಳಿಸಿದ್ದು, ಬಿಸಿಸಿಐ ಆಡಳಿತ ಮಂಡಲಿ ಸದಸ್ಯರು ತೀರ್ಮಾನಿಸಿರುವಂತೆ, 2017ರ ಐಪಿಎಲ್ ಪಂದ್ಯಾವಳಿಯನ್ನು ವಿದೇಶದಲ್ಲಿ ನಡೆಸುವ ಚಿಂತನೆ ಇದೆ ಎಂದು ಹೇಳಿದ್ದಾರೆ. ಈ ವರ್ಷದ ಪರಿಸ್ಥಿತಿ ಕುರಿತಂತೆ ಬಿಸಿಸಿಐ ಸದಸ್ಯರು ಚರ್ಚೆ ನಡೆಸಿದ್ದು, ದೇಶ ಹಾಗೂ ವಿದೇಶದಲ್ಲಿನ ಸ್ಥಳಗಳ ಪರಿಶೀಲನೆ ನಡೆಸಲಾಗುತ್ತಿದೆ. ಮೈದಾನದ ಲಭ್ಯತೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಪಂದ್ಯಾವಳಿಯನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಬರಗಾಲ ತೀವ್ರವಾಗಿರುವುದರಿಂದ, ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಕೋರ್ಟ್ ಆದೇಶ ನೀಡಿತ್ತು. ಇದು ಸೇರಿದಂತೆ ಹಲವು ಕಾರಣಗಳಿಂದ, ಐಪಿಎಲ್ 9ನೇ ಆವೃತ್ತಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹಾಗಾಗಿ, ಪಂದ್ಯಾವಳಿಯನ್ನೇ ವಿದೇಶಕ್ಕೆ ಸ್ಥಳಾಂತರಿಸುವ ಚಿಂತನೆ ಬಿಸಿಸಿಐ ಗೆ ಇದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...