alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಪಂದ್ಯದ ಸಮಯದಲ್ಲಿ ಬದಲಾವಣೆ….

ಐಪಿಎಲ್ -11 ಏಪ್ರಿಲ್ 7ರಿಂದ ಮೇ. 22ರವರೆಗೆ ನಡೆಯಲಿದೆ. ಉದ್ಘಾಟನಾ ಪಂದ್ಯ ಹಾಗೂ ಅಂತಿಮ ಹಣಾಹಣಿ ಮುಂಬೈನಲ್ಲಿ ನಡೆಯಲಿದೆ. ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಅಧಿಕೃತ ಹೇಳಿಕೆ ನೀಡಿದೆ.

ಐಪಿಎಲ್ ಉದ್ಘಾಟನಾ ಕಾರ್ಯಕ್ರಮ ಏಪ್ರಿಲ್ 6ರಂದು ಮುಂಬೈನಲ್ಲಿ ನಡೆಯಲಿದೆ. ಈ ಮಧ್ಯೆ ಐಪಿಎಲ್ ಪಂದ್ಯಗಳ ಸಮಯದಲ್ಲಿ ಬದಲಾವಣೆ ಮಾಡಿದೆ. ಈ ಹಿಂದೆ ರಾತ್ರಿ 8 ಗಂಟೆಗೆ ಆರಂಭವಾಗ್ತಿದ್ದ ಪಂದ್ಯಗಳು ರಾತ್ರಿ 7 ಗಂಟೆಗೆ ಶುರುವಾಗಲಿದೆ. 4 ಗಂಟೆಗೆ ಶುರುವಾಗ್ತಿದ್ದ ಪಂದ್ಯ 5.30ಕ್ಕೆ ಶುರುವಾಗಲಿದೆ.

ಪಂದ್ಯದ ಸಮಯ ಬದಲಾವಣೆ ಮಾಡಿರುವುದ್ರಿಂದ ಎರಡೂ ಪಂದ್ಯಗಳ ವೀಕ್ಷಣೆ ಅಭಿಮಾನಿಗಳಿಗೆ ಕಷ್ಟವಾಗಲಿದೆ. ಆದ್ರೆ ಪ್ರಸಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಎರಡೂ ಪಂದ್ಯಗಳು ಬೇರೆ ಬೇರೆ ಚಾನೆಲ್ ನಲ್ಲಿ ಪ್ರಸಾರವಾಗಲಿವೆ ಎಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ. ಪಂದ್ಯದ ಸಮಯ ಬದಲಿಸುವಂತೆ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡಲಾಗಿದೆ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.

ಕಿಂಗ್ಸ್ ಇಲವೆನ್ ಪಂಜಾಬ್ ನಾಲ್ಕು ಪಂದ್ಯಗಳನ್ನು ಮೊಹಾಲಿಯಲ್ಲಿ ಹಾಗೂ ಮೂರು ಪಂದ್ಯಗಳನ್ನು ಇಂದೋರ್ ನಲ್ಲಿ ಆಡಲಿದೆ. ಈ ಎರಡು ವರ್ಷಗಳಿಂದ ನಿಷೇಧದಲ್ಲಿರುವ ರಾಜಸ್ತಾನ್ ರಾಯಲ್ಸ್ ಮತ್ತೆ ಪಂದ್ಯ ಆಡಲಿದೆಯೇ ಎಂಬ ಸಂಗತಿ ಜನವರಿ 24ರಂದು ಹೈಕೋರ್ಟ್ ತೀರ್ಪಿನ ನಂತ್ರ ಗೊತ್ತಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...