alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಫ್ರಾಂಚೈಸಿಗಳ ಸಭೆಯಲ್ಲಿ ಮಹತ್ವದ ತೀರ್ಮಾನ?

ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ತಂಡದ ಮಾಲೀಕರು ಮುಂಬೈನಲ್ಲಿಂದು ಸಭೆ ಸೇರುತ್ತಿದ್ದಾರೆ. ಸಭೆಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ. 2018ರ ಆವೃತ್ತಿಯಲ್ಲಿ ಜಾರಿಗೆ ಬರಲಿರುವ ಹೊಸ ಆದಾಯ ನೀತಿ ಬಗ್ಗೆ ಕೂಡ ಮಾತುಕತೆ ನಡೆಯಲಿದೆ.

ಸದ್ಯ ಮೂವರು ಆಟಗಾರರ ರಿಟೆನ್ಷನ್ ಪಾಲಿಸಿ ಜಾರಿಯಲ್ಲಿದೆ. ರೈಟ್ ಟು ಮ್ಯಾಚ್ ಅನ್ನೋ ನಿಯಮವನ್ನು ಕೂಡ ಅಳವಡಿಸಲಾಗಿದೆ. ಸದ್ಯಇಬ್ಬರು ಭಾರತೀಯ ಆಟಗಾರ ಮತ್ತು ಓರ್ವ ವಿದೇಶಿ ಆಟಗಾರರನ್ನು ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಳ್ಳಬಹುದು.

ಈ ನಿಯಮಕ್ಕೆ ಬದಲಾವಣೆ ತರುವ ಸಾಧ್ಯತೆಯೂ ಇಲ್ಲದಿಲ್ಲ. ಯಾಕಂದ್ರೆ ಮೂವರು ಭಾರತೀಯ ಆಟಗಾರರನ್ನೇ ಮಾಲೀಕ ತಂಡದಲ್ಲಿ ಉಳಿಸಿಕೊಳ್ಳಲು ಯತ್ನಿಸಿದ್ರೆ ತಪ್ಪೇನು ಅನ್ನೋದು ಹಲವರ ಪ್ರಶ್ನೆ.

ಫ್ರಾಂಚೈಸಿಗಳ ಆದಾಯ ಕೂಡ 75 ಕೋಟಿಯಿಂದ 220 ಕೋಟಿಗೆ ಏರಿಕೆಯಾಗಿದ್ದು, ಮತ್ತಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಾ ತಂಡಗಳಿಗೂ ಪ್ರತಿಭಾವಂತ ಆಟಗಾರರ ಹಂಚಿಕೆ ಆಗಬೇಕು ಅನ್ನೋದು ಐಪಿಎಲ್ ಅಧಿಕಾರಿಗಳ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...