alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರೀಡಾಂಗಣದಲ್ಲೇ ಕೊಹ್ಲಿ ಪಾದಕ್ಕೆರಗಿದ ಅಭಿಮಾನಿ…!

ಈ ಬಾರಿಯ ಐಪಿಎಲ್ ನಲ್ಲಿ ಭಾರಿ ಕುತೂಹಲದ ಘಟನೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದಷ್ಟೇ ಅಭಿಮಾನಿಯೊಬ್ಬ ಭದ್ರತೆಯನ್ನೂ ಲೆಕ್ಕಿಸದೆ ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಕಾಲಿಗೆರಗಿದ್ದ.

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಆರ್ ಸಿ ಬಿ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದ ವೇಳೆಯೂ ಇಂತಹದೇ ಘಟನೆಯೊಂದು ನಡೆದಿದೆ. ಆರ್ ಸಿ ಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 40 ಬಾಲ್ ಗೆ 70 ರನ್ ಬಾರಿಸಿದಾಗ ಅವರ ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ.

ಬೆಂಗಳೂರಿನಲ್ಲಿ ಪಂದ್ಯ ನಡೆಯದಿದ್ರೂ, ದೆಹಲಿಯಲ್ಲಿ ಮ್ಯಾಚ್ ವೀಕ್ಷಿಸಲು ಆರ್ ಸಿ ಬಿ ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತ್ತು. ಈ ವೇಳೆ ಕೊಹ್ಲಿ ರನ್ ಮಳೆ ಹರಿಸಲು ಆರಂಭಿಸುತ್ತಿದ್ದಂತೆ, ಅಭಿಮಾನಿಗಳ ಖುಷಿ ಎಲ್ಲೆ ಮೀರಿತ್ತು. ಈ ಮಧ್ಯೆ ಕೊಹ್ಲಿಯ ಕಟ್ಟಾ ಅಭಿಮಾನಿಯೊಬ್ಬ ಭದ್ರತೆಯನ್ನೂ ಲೆಕ್ಕಿಸದೆ ಮೈದಾನಕ್ಕೆ ನುಗ್ಗಿಯೇ ಬಿಟ್ಟ. ಭದ್ರತಾ ಸಿಬ್ಬಂದಿ ಆತನನ್ನ ತಡೆಯಲು ಓಡಿ ಬಂದರೂ ಸಿಗದೆ, ಮೈದಾನಕ್ಕೆ ಹೋಗಿ ಕೊಹ್ಲಿ ಪಾದಕ್ಕೆ ಎರಗಿದ್ದಾನೆ. ಅಲ್ಲದೆ ಸೆಲ್ಫಿ ಕೂಡಾ ಕ್ಲಿಕ್ಕಿಸಿಕೊಂಡಿದ್ದಾನೆ. ಕೊನೆಗೆ ಭದ್ರತಾ ಸಿಬ್ಬಂದಿ ಹೋಗಿ ಆತನನ್ನ ಎಳೆದು ಹೊರಗೆ ಕಳುಹಿಸಿದ್ದಾರೆ. ಇದಕ್ಕೆ ಅಭಿಮಾನಿಗಳ ಪ್ರೀತಿ ಅನ್ನಬೇಕೋ ಅತಿರೇಕ ಅನ್ನಬೇಕೋ ತಿಳಿಯದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...