alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಲಯನ್ಸ್ ಮಣಿಸಿದ ಡೇರ್ ಡೆವಿಲ್ಸ್

ipl-panth

ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ, ಗುಜರಾತ್ ಲಯನ್ಸ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ ಭರ್ಜರಿ ಜಯ ಗಳಿಸಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ ಬೃಹತ್ ಮೊತ್ತವನ್ನು ಕಲೆ ಹಾಕಿತ್ತಾದರೂ, ರಿಶಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡ 7 ವಿಕೆಟ್ ಅಂತರದಿಂದ ಜಯಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಗುಜರಾತ್ ಲಯನ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿತು.

ಸುರೇಶ್ ರೈನಾ 77, ದಿನೇಶ್ ಕಾರ್ತಿಕ್ 65, ಆ್ಯರೊನ್ ಫಿಂಚ್ 27, ರವೀಂದ್ರ ಜಡೇಜ ಅಜೇಯ 18 ರನ್ ಗಳಿಸಿದರು. ಡೆಲ್ಲಿ ಪರ ಕಗಿಸೊ ರಬಾಡ, ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದರು.

209 ರನ್ ಗೆಲುವಿನ ಗುರಿ ಬೆನ್ನತ್ತಿದ ಡೆಲ್ಲಿ ಪರವಾಗಿ ರಿಶಬ್ ಪಂತ್ 97, ಸಂಜು ಸ್ಯಾಮ್ಸನ್ 61 ರನ್ ಗಳಿಸಿದ್ದು, ಕೋರಿ ಆಂಡರ್ಸನ್ 18, ಶ್ರೇಯಸ್ ಅಯ್ಯರ್ 14 ರನ್ ಗಳಿಸಿ 17.3 ಓವರ್ ಗಳಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...