alex Certify
ಕನ್ನಡ ದುನಿಯಾ       Mobile App
       

Kannada Duniya

ಚೆನ್ನೈ ಗೆಲುವಿನ ನಂತ್ರ ಮೈದಾನದಲ್ಲಿ ಮಕ್ಕಳ ಪಾರ್ಟಿ

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್-11ನೇ ಆವೃತ್ತಿಯ ಚಾಂಪಿಯನ್ ಆಗಿದೆ. ಧೋನಿ ಪಡೆ 8 ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದ್ರಾಬಾದ್ ಮಣಿಸಿ ಚಾಂಪಿಯನ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು, ಅಭಿಮಾನಿಗಳೊಂದೇ ಅಲ್ಲ ಆಟಗಾರರ ಮಕ್ಕಳು ಕೂಡ ಸತತ ಮೂರನೇ ಬಾರಿ ಚಾಂಪಿಯನ್ ಆದ ಖುಷಿಯನ್ನು ಎಂಜಾಯ್ ಮಾಡಿದ್ದಾರೆ.

ಧೋನಿ, ರೈನಾ, ಬಜ್ಜಿ ಸೇರಿದಂತೆ ಕೆಲ ಆಟಗಾರರು ತಮ್ಮ ಮಕ್ಕಳ ಜೊತೆ ಗೆಲುವಿನ ಸಂಭ್ರಮವನ್ನು ಆಚರಿಸಿದ್ದಾರೆ. ಟ್ರೋಫಿ ಮುಂದೆ ಆಟಗಾರರ ಜೊತೆ ಅವ್ರ ಮಕ್ಕಳ ಕೂಡ ಕಾಣಿಸಿಕೊಂಡಿದ್ದಾರೆ. ಹರ್ಭಜನ್ ಸಿಂಗ್ ಹಾಗೂ ರೈನಾ ಪತ್ನಿ ಹಾಗೂ ಮಕ್ಕಳ ಜೊತೆ ಟ್ರೋಫಿ ಹಿಡಿದು ಫೋಟೋಕ್ಕೆ ಫೋಸ್ ನೀಡಿದ್ದಾರೆ.

ಧೋನಿ ಪತ್ನಿ ಸಾಕ್ಷಿ ಹಾಗೂ ಮಗಳು ಜೀವಾ ಚೆನ್ನೈ ಸೂಪರ್ ಕಿಂಗ್ಸ್ ನ ಪ್ರತಿ ಪಂದ್ಯದಲ್ಲೂ ಕಾಣಿಸಿಕೊಳ್ತಾರೆ. ಫೈನಲ್ ನಲ್ಲಿ ಕೂಡ ಧೋನಿ ಪತ್ನಿ ಸಾಕ್ಷಿ ಹಾಗೂ ಜೀವಾ ಮಿಂಚಿದ್ದಾರೆ. ಮೈದಾನದಲ್ಲಿ ಜೀವಾ ಜೊತೆ ಬಜ್ಜಿ ಹಾಗೂ ರೈನಾ ಮಕ್ಕಳು ಆಟವಾಡಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಭಾರತೀಯ ಆಟಗಾರರೊಂದೇ ಅಲ್ಲ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ಕೂಡ ತಮ್ಮ ಮಗನ ಜೊತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಚೆನ್ನೈ ತಂಡದ ಯಶಸ್ಸಿನ ಹಿಂದೆ ಕುಟುಂಬಸ್ಥರ ಪಾತ್ರ ಬಹಳಷ್ಟಿದೆ. ಪ್ರತಿ ಪಂದ್ಯದಲ್ಲೂ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುವ ಕುಟುಂಬಸ್ಥರು ತಂಡಕ್ಕೆ ಬೆಂಬಲ ನೀಡ್ತಾ ಬಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...