alex Certify
ಕನ್ನಡ ದುನಿಯಾ       Mobile App
       

Kannada Duniya

6.3 ಬಿಲಿಯನ್‌ ಡಾಲರ್‌ ಮೊತ್ತಕ್ಕೆ ಐಪಿಎಲ್ ಬ್ರಾಂಡ್ ಮೌಲ್ಯ ಏರಿಕೆ

ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ಆರಂಭವಾಗಿ 11 ವರ್ಷಗಳು ಕಳೆದರೂ ಇದರ ಬ್ರಾಂಡ್ ಮೌಲ್ಯ ಮಾತ್ರ ವರ್ಷದಿಂದ ವರ್ಷಕ್ಕೆ ಉತ್ತುಂಗಕ್ಕೆ ಏರುತ್ತಲೇ ಇದೆ. ಪ್ರತಿ ವರ್ಷ ಪ್ರೇಕ್ಷಕರನ್ನು, ಜಾಹೀರಾತುದಾರನ್ನು ತನ್ನತ್ತ ಆಕರ್ಷಿಸುತ್ತಲೇ ಇದೆ. 11ನೇ ಆವೃತ್ತಿ ನಂತರ ಐಪಿಎಲ್‌ ಬ್ರಾಂಡ್ ಮೌಲ್ಯ 43.233 ಸಾವಿರ ಕೋಟಿ ರೂ. ಏರಿಕೆಯಾಗಿದೆ ಎಂಬುದು ಗಮನಾರ್ಹವಾದ ಅಂಶ.

ಈ ಕುರಿತು ಲೀಗ್ ನ ಜಾಗತಿಕ ಮೌಲ್ಯಮಾಪನ ಮತ್ತು ಕಾರ್ಪೊರೇಟ್‌ ಹಣಕಾಸು ಸಲಹೆಗಾರ ಡಫ್‌ ಮತ್ತು ಫೆಲ್ಸ್‌ ನೀಡಿರುವ ವರದಿ ಹೇಳುವಂತೆ 11ನೇ ಆವೃತ್ತಿ ನಂತರ ಐಪಿಎಲ್‌ ಬ್ರಾಂಡ್ ಮೌಲ್ಯ ಶೇ.19 ರಷ್ಟು ಏರಿಕೆಯಾಗಿದ್ದು, 6.3 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೊತ್ತಕ್ಕೆ ಅಂದರೆ ಅಂದಾಜು 43,233 ಸಾವಿರ ಕೋಟಿ ರೂ. ಏರಿಕೆಯಾಗಿದೆ. 2016 ಮತ್ತು 2017ರಲ್ಲಿ ಐಪಿಎಲ್‌ ಟಿ20 ಲೀಗ್‌ ಬ್ರಾಂಡ್ ಮೌಲ್ಯ ಕ್ರಮವಾಗಿ 5.3 ಮತ್ತು 4.16 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೊತ್ತದಷ್ಟಿತ್ತು ಎಂದು ಹೇಳಿದೆ.

2018ರಿಂದ ಮುಂದಿನ ಐದು ವರ್ಷಗಳಿಗೆ 16,347.5 ಕೋಟಿ ರೂ. ನೀಡಿ ಪ್ರಸಾರ ಮಾಡುವ ಹಕ್ಕನ್ನು ಸ್ಟಾರ್‌ ಇಂಡಿಯಾ ಪಡೆದುಕೊಂಡಿದ್ದು ಹಾಗೂ ಎರಡು ವರ್ಷ ಗೈರು ಹಾಜರಾತಿ ನಂತರ 11ನೇ ಆವೃತ್ತಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಮರಳಿದ ಬಳಿಕ ಐಪಿಎಲ್‌ ರೋಚಕತೆ ಮತ್ತಷ್ಟು ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...