alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಮನೆಗೆ ಬಂದ ವಿಶೇಷ ಅತಿಥಿಗೆ ಸಾಕ್ಷಿ ಬಡಿಸಿದ್ರು ಊಟ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಐಪಿಎಲ್ ಗೆಲುವಿನ ನಂತ್ರ ಧೋನಿ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಆದ್ರೆ ಧೋನಿಯೊಂದೇ ಅಲ್ಲ ಅವ್ರ ಕುಟುಂಬದವರನ್ನು ಪ್ರೀತಿ ಮಾಡುವ ಅಭಿಮಾನಿಗಳ ಸಂಖ್ಯೆಯೂ ಸಾಕಷ್ಟಿದೆ. ಧೋನಿ ಕುಟುಂಬವನ್ನು ಪ್ರೀತಿಸುವ ಅಭಿಮಾನಿಯೊಬ್ಬರು ಶುಕ್ರವಾರ ಧೋನಿ ಮನೆಗೆ ಹೋಗಿ ಕುಟುಂಬಸ್ಥರ ಜೊತೆ ಊಟ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್ ನ ಅತಿ ದೊಡ್ಡ ಅಭಿಮಾನಿ ಯಾರೆಂದು ಕೇಳಿದಾಗ ಮೊದಲು ಬರೋದು ಸುಧೀರ್ ಕುಮಾರ್, ಗೌತಮ್ ಹೆಸರು. ಭಾರತ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗಾಗಿ ಸುಧೀರ್ ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಒಬ್ಬರೇ ಅಲ್ಲ ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೂ ಸುಧೀರ್ ಗೊತ್ತು. ಪ್ರತಿಯೊಂದು ಪಂದ್ಯದಲ್ಲೂ ಕಾಣಿಸಿಕೊಳ್ಳುವ ಸುಧೀರ್ ಗಾಗಿ ಟಿಕೆಟ್ ಒದಗಿಸಿಕೊಡ್ತಾರೆ ಈ ಆಟಗಾರರು.

ದೇಹದ ಮೇಲೆ ಭಾರತದ ಧ್ವಜವನ್ನು ಬಿಡಿಸಿಕೊಂಡಿರುವ ಸುಧೀರ್ ಭಾರತ ನಕಾಶೆಯನ್ನು ತಲೆ ಮೇಲೆ ಹಾಕಿಕೊಂಡಿದ್ದಾರೆ. ತೆಂಡೂಲ್ಕರ್ ಅವರ ಪ್ರತಿ ಪಂದ್ಯದಲ್ಲೂ ಕಾಣಿಸಿಕೊಳ್ತಿದ್ದ ಸುಧೀರ್ ಸಚಿನ್ ನಿವೃತ್ತಿ ನಂತ್ರವೂ ಭಾರತದ ಪ್ರತಿಯೊಂದು ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಹೋಗ್ತಾರೆ.

ಶುಕ್ರವಾರ ಸುಧೀರ್ ಗೆ ಅದೃಷ್ಟದ ದಿನವಾಗಿತ್ತು. ಧೋನಿ ಕುಟುಂಬಸ್ಥರ ಜೊತೆ ಫಾರ್ಮ್ ಹೌಸ್ ನಲ್ಲಿ ಊಟ ಮಾಡುವ ಅವಕಾಶ ಸಿಕ್ಕಿತ್ತು. ಧೋನಿ ಕುಟುಂಬಸ್ಥರ ಜೊತೆ ಊಟ ಮಾಡಿದ ಫೋಟೋವನ್ನು ಟ್ವೀಟರ್ ಗೆ ಹಾಕಿರುವ ಸುಧೀರ್ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಜೊತೆ ಸ್ಪೇಷಲ್ ದಿನ. ಸೂಪರ್ ಲಂಚ್ ವಿಥ್ ಸೂಪರ್ ಫ್ಯಾಮಿಲಿ. ಧನ್ಯವಾದ ಧೋನಿ ಮತ್ತು ಸಾಕ್ಷಿ .  ಈ ಕ್ಷಣವನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಐಪಿಎಲ್ 2018ರ ನಂತ್ರ ವಿಶ್ರಾಂತಿಯಲ್ಲಿದ್ದಾರೆ ಮಿಸ್ಟರ್ ಧೋನಿ ಎಂದು ಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...