alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಟ್ಟಿಂಗ್ ವಿಚಾರಣೆಗೂ ಮುನ್ನ ಸಲ್ಮಾನ್ ಭೇಟಿಯಾದ ಅರ್ಬಾಜ್

ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಸಲ್ಮಾನ್ ಖಾನ್ ಸಹೋದರ, ನಟ ಹಾಗೂ ನಿರ್ಮಾಪಕ ಅರ್ಬಾಜ್ ಖಾನ್ ಹೆಸರು ಕೇಳಿ ಬಂದಿದೆ. ಥಾಣೆ ಪೊಲೀಸರು ಈಗಾಗಲೇ ಅರ್ಬಾಜ್ ಖಾನ್ ಗೆ ಸಮನ್ಸ್ ಜಾರಿ ಮಾಡಿದ್ದರು. ಸಮನ್ಸ್ ಜಾರಿ ಹಿನ್ನೆಲೆಯಲ್ಲಿ ಅರ್ಬಾಜ್ ಖಾನ್ ಥಾಣಾ ಪೊಲೀಸ್ ಮುಂದೆ ಬೆಳಿಗ್ಗೆ 11 ಗಂಟೆಗೆ ಹಾಜರಾಗಿದ್ದಾರೆ.

ಥಾಣೆಗೆ ಬರುವ ಮೊದಲು ಅರ್ಬಾಜ್, ಸಹೋದರ ಸಲ್ಮಾನ್ ಖಾನ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಳಿಗ್ಗೆ 9.30ಕ್ಕೆ ಅರ್ಬಾಜ್, ಸಲ್ಮಾನ್ ಭೇಟಿಗಾಗಿ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಬಂದಿದ್ದರು. ತುಂಬಾ ಸಮಯ ಮಾತುಕತೆ ನಡೆಸಿದ ಅರ್ಬಾಜ್ ನಂತ್ರ ಕಾರನ್ನೇರಿ ಥಾಣೆ ಪೊಲೀಸ್ ಠಾಣೆಗೆ ಬಂದಿದ್ದಾರೆ. ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಮತ್ತು ಅರ್ಬಾಜ್ ಖಾನ್ ವಕೀಲರು ಕೂಡ ಪೊಲೀಸ್ ಠಾಣೆಯಲ್ಲಿ ಉಪಸ್ಥಿತರಿದ್ದಾರೆ.

ಅರ್ಬಾಜ್ ತಂದೆ ಸಲೀಂ ಮಗನ ಮೇಲೆ ಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.  ಮಾರ್ನಿಂಗ್ ವಾಕ್ ಗೆ ಕಡಲತೀರಕ್ಕೆ ಬಂದಿದ್ದ ಸಲೀಂ ಖಾನ್ ರಿಗೆ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರ ನೀಡಲು ನಿರಾಕರಿಸಿದ ಸಲೀಂ ನಿಷ್ಪ್ರಯೋಜಕ ಎಂದಷ್ಟೇ ಉತ್ತರ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...