alex Certify
ಕನ್ನಡ ದುನಿಯಾ       Mobile App
       

Kannada Duniya

‘ಐಪಿಎಲ್’ ಹರಾಜಿಗೆ ರೆಡಿಯಾಗಿರೋ ಯುವಿಯ ಮೂಲ ಬೆಲೆ ಎಷ್ಟು ಗೊತ್ತಾ…?

ಇನ್ನೇನು ಕ್ರಿಕೆಟ್ ನಲ್ಲಿ ಯುವರಾಜ್ ಸಿಂಗ್ ಭವಿಷ್ಯ ಮುಗಿದೇ ಹೋಯಿತು ಎಂದು ಅಂದುಕೊಳ್ಳುತ್ತಿರುವಾಗಲೇ ಸ್ಫೋಟಕ ಬ್ಯಾಟ್ಸ್ ಮನ್ ಮತ್ತೆ ಐಪಿಎಲ್ ಹರಾಜಿಗೆ ಸಿದ್ಧರಾಗಿದ್ದಾರೆ.

ಒಂದು ಕಾಲದಲ್ಲಿ ಅತಿ ಹೆಚ್ಚು ಬೆಲೆಗೆ ಬಿಕರಿಯಾಗಿದ್ದ 2011ರ ವಿಶ್ವಕಪ್ ಹೀರೋ ಈ ಬಾರಿ ತಮಗೆ 1 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸದ್ಯ ಫಾರ್ಮ್ ಕಳೆದುಕೊಂಡು ಯಾರಿಗೂ ಬೇಡವಾಗಿದ್ದರೂ ಅತಿ ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಹರಾಜಿಗೆ ಲಭ್ಯವಿರುವ ಇನ್ನಿತರ ಭಾರತೀಯ ಕ್ರಿಕೆಟಿಗರಾದ ವೇಗಿಗಳಾದ ಮೊಹಮ್ಮದ್ ಶಮಿ, ಇಶಾಂತ್ ಶರ್ಮ, ಸ್ಪಿನ್ನರ್ ಅಕ್ಷರ್ ಪಟೇಲ್, ಕೀಪರ್ ವೃದ್ಧಿಮಾನ್ ಸಾಹಾ ಅವರ ಮೂಲ ಬೆಲೆಯೂ 1 ಕೋಟಿ ರೂ. ಆಗಿದೆ.

ಭಾರತೀಯ ಆಟಗಾರರಲ್ಲಿ ಈ ಬಾರಿ ಅತಿ ಹೆಚ್ಚು ಮೂಲಧನ ಹೊಂದಿರುವ ಆಟಗಾರನೆಂದರೆ ವೇಗಿ ಜಯದೇವ್ ಉನಾದ್ಕತ್. ಇವರಿಗೆ 1.5 ಕೋಟಿ ರೂ. ಮೂಲಧನ ನಿಗದಿಯಾಗಿದ್ದು, ಅಂತಿಮವಾಗಿ ಯಾವ ಬೆಲೆಗೆ ಹರಾಜಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಆದರೆ ಯಾವ ಭಾರತೀಯ ಆಟಗಾರನೂ ಎರಡು ಕೋಟಿ ರೂ. ಮೂಲಧನವನ್ನಿರಿಸಿಕೊಂಡಿಲ್ಲ ಎಂಬುದು ಗಮನಾರ್ಹ ಅಂಶ.

ವಿದೇಶಿ ಆಟಗಾರರಾದ ಬ್ರೆಂಡನ್ ಮೆಕಲಂ, ಡೆರ್ಸಿ ಶಾರ್ಟ್ ಮತ್ತು ಕೋರಿ ಆಂಡರ್ಸನ್ 2 ಕೋಟಿ ರೂ. ಮೂಲಬೆಲೆ ನಿಗದಿಪಡಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ 1.5 ಕೋಟಿ ರೂ. ಮೂಲಬೆಲೆ ನಿಗದಿಪಡಿಸಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್, ಆರೋನ್ ಫಿಂಚ್ ಇಬ್ಬರೂ ಸದ್ಯದ ಬಿಝಿ ಶೆಡ್ಯೂಲ್ ಹಾಗೂ ಮುಂಬರುವ ವಿಶ್ವಕಪ್, ಆಶಸ್ ಸರಣಿಗಳನ್ನು ಗಮನದಲ್ಲಿರಿಸಿಕೊಂಡು ಐಪಿಎಲ್ ಕಣದಿಂದ ದೂರ ಸರಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...