alex Certify
ಕನ್ನಡ ದುನಿಯಾ       Mobile App
       

Kannada Duniya

‘ಐಪಿಎಲ್’ ಆಟಗಾರರ ಹರಾಜು ಪ್ರಕ್ರಿಯೆ ಆರಂಭ….

ಬೆಂಗಳೂರಿನಲ್ಲಿಂದು ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ. 361 ಭಾರತೀಯರು ಸೇರಿದಂತೆ ಒಟ್ಟು 578 ಆಟಗಾರರು ಹರಾಜಿಗಿದ್ದಾರೆ. ಒಟ್ಟು 16 ಆಟಗಾರರ ಮೂಲ ಬೆಲೆಯೇ 1.5-2 ಕೋಟಿ ರೂಪಾಯಿ.

ಬೆನ್ ಸ್ಟೋಕ್ಸ್, ಆರ್.ಅಶ್ವಿನ್, ಯುವರಾಜ್ ಸಿಂಗ್, ಶಿಖರ್ ಧವನ್, ಮಿಚೆಲ್ ಸ್ಟಾರ್ಕ್, ಕ್ರಿಸ್ ಗೇಯ್ಲ್ ಹಾಗೂ ಡ್ವೈನೆ ಬ್ರಾವೋ ಭಾರೀ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಇದೆ. ಈಗಾಗ್ಲೇ ಫ್ರಾಂಚೈಸಿಗಳೆಲ್ಲ ತಮ್ಮ ತಂಡಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಲೆಕ್ಕಾಚಾರ ಹಾಕಿದ್ದಾರೆ.

ಅಂಡರ್ -19 ತಂಡದ ಆಟಗಾರರು ಕೂಡ ಹರಾಜು ಪಟ್ಟಿಯಲ್ಲಿದ್ದಾರೆ. ನಾಯಕ ಪೃಥ್ವಿ ಶಾ, ಶುಭಂ ಗಿಲ್, ಹಿಮಾಂಶು ರಾಣಾ, ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ಅರ್ಶ್ ದೀಪ್ ಸಿಂಗ್ ಹಾಗೂ ಹಾರ್ವಿಕ್ ದೇಸಾಯಿ ಐಪಿಎಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...