alex Certify
ಕನ್ನಡ ದುನಿಯಾ       Mobile App
       

Kannada Duniya

ಗೇಲ್, ಗಂಭೀರ್, ಯುವಿ, ಭಜ್ಜಿಗೆ ‘ಶಾಕ್’…!

ಬೆಂಗಳೂರಿನಲ್ಲಿ ನಡೆಯುತ್ತಿರೋ ಐಪಿಎಲ್ ಹರಾಜಿನಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆದಿವೆ. ಟಿ-20 ಕ್ರಿಕೆಟ್ ನ ಬಾಸ್ ಎನಿಸಿಕೊಂಡಿದ್ದ ಕ್ರಿಸ್ ಗೇಲ್ ರನ್ನು ಯಾರೂ ಖರೀದಿ ಮಾಡಿಲ್ಲ. ಇದರೊಂದಿಗೆ 38ರ ಹರೆಯದ ಜಮೈಕನ್ ದಾಂಢಿಗನ ಸ್ಫೋಟಕ ಬ್ಯಾಟಿಂಗ್ ನೇಪಥ್ಯಕ್ಕೆ ಸರಿಯುತ್ತಿದೆ.

ಕಳೆದ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಗೇಲ್ ಗೆ ಗಾಯದ ಸಮಸ್ಯೆ ಕಾಡಿತ್ತು. ಇನ್ನು 36 ವರ್ಷದ ಕ್ರಿಕೆಟಿಗ ಗೌತಮ್ ಗಂಭೀರ್ ಎರಡು ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಐಪಿಎಲ್ ಟ್ರೋಫಿ ಗೆದ್ದು ಕೊಟ್ಟ ನಾಯಕ. ಆದ್ರೆ ಕೆಕೆಆರ್ ತಂಡ ಗಂಭೀರ್ ರನ್ನು ಉಳಿಸಿಕೊಂಡಿಲ್ಲ.

ಹಾಗಾಗಿ ಗಂಭೀರ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪಾಲಾಗಿದ್ದಾರೆ. 2.8 ಕೋಟಿ ರೂಪಾಯಿಗೆ ಗಂಭೀರ್ ಬಿಕರಿಯಾಗಿದ್ದಾರೆ. ಈ ಬಾರಿ ಯುವರಾಜ್ ಸಿಂಗ್ ಗೆ ಕೂಡ ನಿರಾಸೆಯಾಗಿದೆ. 2014ರಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಅಂದ್ರೆ 16 ಕೋಟಿಗೆ ಬಿಕರಿಯಾಗಿದ್ದ ಯುವರಾಜ್ ಸಿಂಗ್ ಈ ಬಾರಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡಕ್ಕೆ ಮರಳಿದ್ದಾರೆ.

ಆದ್ರೆ ಯುವಿ ಸೇಲ್ ಆಗಿರೋದು ಕೇವಲ 2 ಕೋಟಿ ರೂಪಾಯಿಗೆ. ಇನ್ನು ಹರ್ಭಜನ್ ಸಿಂಗ್ ರನ್ನು ಕೂಡ ಮುಂಬೈ ಇಂಡಿಯನ್ಸ್ ತಂಡ ಉಳಿಸಿಕೊಂಡಿಲ್ಲ. ಮೂಲ ಬೆಲೆ 2 ಕೋಟಿಗೆ ಭಜ್ಜಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...