alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್: ತಂಡದಿಂದ ಹೊರಬಿದ್ದ ಯುವರಾಜ್, ಗಂಭೀರ್

ಅಂತರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಹೊರಗಿರುವ ಯುವರಾಜ್ ಸಿಂಗ್ ಹಾಗೂ ಗೌತಮ್ ಗಂಭೀರ್ ಅವ್ರನ್ನ ಐಪಿಎಲ್ ತಂಡಗಳು ಹೊರ ಹಾಕಿವೆ. ಮುಂದಿನ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಡೆಯಲಿದೆ.

ಇದಕ್ಕೂ ಮುನ್ನ ಕಿಂಗ್ಸ್ ಇಲವೆನ್ ಪಂಜಾಬ್, ಯುವರಾಜ್ ಸಿಂಗ್ ಹಾಗೂ ಆರೋನ್ ಫಿಂಚ್ ರನ್ನು ಹೊರ ಹಾಕಿದೆ. ಕಿಂಗ್ಸ್ ಇಲವೆನ್ ಪಂಜಾಬ್ ಎಂಟು ಆಟಗಾರರನ್ನು ಹೊರ ಹಾಕಿದ್ದು, 9 ಆಟಗಾರರನ್ನು ಮಾತ್ರ ಇಟ್ಟುಕೊಂಡಿದೆ.

ಯಾವ ಆಟಗಾರರನ್ನು ಇಟ್ಟುಕೊಳ್ಳಬೇಕು, ಯಾವ ಆಟಗಾರರನ್ನು ಹೊರ ಹಾಕಬೇಕು ಎಂಬುದನ್ನು ನಿರ್ಧರಿಸಲು ಐಪಿಎಲ್ ತಂಡಗಳಿಗೆ ನವೆಂಬರ್ 15ರವರೆಗೆ ಅವಕಾಶವಿತ್ತು. ಎಲ್ಲ ತಂಡಗಳು ತಮ್ಮ ಪಟ್ಟಿಯನ್ನು ಮಂಡಳಿಗೆ ನೀಡಿವೆ. ನಿರೀಕ್ಷೆಯಂತೆ ಡೆಲ್ಲಿ ತಂಡದಿಂದ ಗೌತಮ್ ಗಂಭೀರ್ ಹೊರ ಬಿದ್ದಿದ್ದಾರೆ. 2018ರ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ತೋರಿದ ಕಾರಣ ಗೌತಮ್ ರನ್ನು ಹೊರ ಹಾಕಲಾಗಿದೆ.

ದೆಹಲಿ ತಂಡ ಮೊಹಮ್ಮದ್ ಶಮಿ ಸೇರಿದಂತೆ ಇನ್ನೂ ಅನೇಕ ಆಟಗಾರರನ್ನು ಹೊರ ಹಾಕಿದೆ. ಮುಂಬೈ ಇಂಡಿಯನ್ಸ್ 18 ಆಟಗಾರರನ್ನು ತನ್ನ ಬಳಿ ಇಟ್ಟುಕೊಂಡಿದ್ದು, 10 ಆಟಗಾರರನ್ನು ಹೊರ ದಬ್ಬಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...