alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಪ್ರಿಯರಿಗೊಂದು ‘ಶಾಕಿಂಗ್’ ಸುದ್ದಿ

ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಬಗ್ಗೆ ಇಡೀ ವಿಶ್ವ ಕುತೂಹಲದಿಂದ ಕಾಯುತ್ತಿದ್ದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾತ್ರ ಚುನಾವಣಾ ಆಯೋಗ ಯಾವಾಗ ಚುನಾವಣಾ ದಿನಾಂಕ ಪ್ರಕಟಣೆ ಮಾಡುತ್ತದೆ ಎಂಬುದನ್ನೇ ಎದುರು ನೋಡುತ್ತಿದೆ.

ಕಾರಣ ಮುಂದಿನ ವರ್ಷ 12ನೇ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಅನ್ನು ಎಲ್ಲಿ ಯಾವಾಗ ಮಾಡಬೇಕೆಂಬ ಗೊಂದಲ. ಮುಂದಿನ ವರ್ಷ ಮೇ 30 ಕ್ಕೆ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಕೂಡ ಪ್ರಾರಂಭವಾಗಲಿರುವುದರಿಂದ ಅದರ ದಿನಾಂಕ ಮತ್ತು ರಾಷ್ಟ್ರೀಯ ತಂಡಗಳ ತಯಾರಿಗಳಿಗೆ ತೊಂದರೆಯಾಗದಂತೆ ಐಪಿಎಲ್ ಪಂದ್ಯಾವಳಿ ನಡೆಸಬೇಕಾದ ಅನಿವಾರ್ಯತೆ, ಹೊಣೆಗಾರಿಕೆಯೂ ಬಿಸಿಸಿಐ ಮೇಲಿದೆ.

ಈ ಹಿಂದೆ 2009 ರಲ್ಲಿ ಮತ್ತು 2014 ರಲ್ಲಿ ಮಹಾಚುನಾವಣೆಗಳು ನಡೆದ ಸಂದರ್ಭದಲ್ಲಿ ಐಪಿಎಲ್ ಕ್ರಮವಾಗಿ ದಕ್ಷಿಣ ಆಫ್ರಿಕಾ ಹಾಗೂ ಯುಎಇಗಳಿಗೆ ಸ್ಥಳಾಂತರವಾಗಿತ್ತು. ಈ ಬಾರಿಯೂ ಬಿಸಿಸಿಐ ದಕ್ಷಿಣ ಆಫ್ರಿಕಾ ಹಾಗೂ ಯುಎಇಗಳನ್ನೇ ಶಾರ್ಟ್ ಲಿಸ್ಟ್ ಮಾಡಿಕೊಂಡಿದೆ.

ಬಿಸಿಸಿಐಗೆ ಯುಎಇ ಕಡೆ ಹೆಚ್ಚು ಒಲವಿದ್ದರೂ ಅಲ್ಲಿ ಲಭ್ಯವಿರುವುದು ಕೇವಲ ಮೂರು ಕ್ರೀಡಾಂಗಣಗಳಷ್ಟೇ(ದುಬೈ, ಶಾರ್ಜಾ, ಅಬುಧಾಬಿ). ಸುಮಾರು 60ಕ್ಕೂ ಹೆಚ್ಚು ಪಂದ್ಯಗಳನ್ನೊಳಗೊಂಡಿರುವ ಐಪಿಎಲ್ ನಂತಹ ದೊಡ್ಡ ಮಾದರಿಯ ಟೂರ್ನಿಗಳಿಗೆ ಕೇವಲ 3 ಸ್ಟೇಡಿಯಂಗಳು ಕಡಿಮೆಯೇ. ಹೀಗಾಗಿ ಬಿಸಿಸಿಐ ದಕ್ಷಿಣ ಆಫ್ರಿಕಾಗೆ ತೆರಳುತ್ತದೋ ಇಲ್ಲವೇ ಯುಎಇಗೆ ಅಂಟಿಕೊಂಡು ಮೂರು ಕ್ರೀಡಾಂಗಣದಲ್ಲೇ ಟೂರ್ನಿ ಸುಧಾರಿಸುತ್ತದೋ ಎಂಬುದೇ ಕುತೂಹಲದ ಪ್ರಶ್ನೆ. ಬಿಸಿಸಿಐ ಈಗ ಚುನಾವಣಾ ಆಯೋಗದ ಪ್ರಕಟಣೆಗಾಗಿ ಕಾತರದಿಂದ ಕಾಯುತ್ತಿದೆ. ಒಂದು ವೇಳೆ ವಿದೇಶದಲ್ಲಿ ಐಪಿಎಲ್ ಟೂರ್ನಿ ಆಯೋಜನೆಯಾದರೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಕೇವಲ ಟಿವಿಯಲ್ಲಿ ಮಾತ್ರ ಪಂದ್ಯಗಳನ್ನು ವೀಕ್ಷಿಸಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...