alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿ ಬೆಲೆಗೆ ಖರೀದಿಯಾದ್ರೂ ಫ್ಲಾಪ್ ಆದ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ ಒಂದು ದಶಕ ಪೂರೈಸಿದೆ. ಮತ್ತೊಂದು ಚುಟುಕು ಕ್ರಿಕೆಟ್ ಸರಣಿಗೆ ಬೇರೆ ಬೇರೆ ರಾಷ್ಟ್ರಗಳ ಆಟಗಾರರು ಸಜ್ಜಾಗಿದ್ದಾರೆ. ಈ ಬಾರಿ ಫ್ರಾಂಚೈಸಿಗಳು ತಮ್ಮ ತಂಡಗಳಲ್ಲಿ ಬದಲಾವಣೆ ಮಾಡ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ವಾಪಸ್ಸಾಗಿದ್ದಾರೆ.

ಇದೇ ತಿಂಗಳ 27, 28 ರಂದು ಬೆಂಗಳೂರಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿಯನ್ನು 17 ಕೋಟಿ ರೂಪಾಯಿ ಕೊಟ್ಟು ಉಳಿಸಿಕೊಂಡಿದೆ. ಆದ್ರೆ ಐಪಿಎಲ್ ನಲ್ಲಿ ಅತಿ ಹೆಚ್ಚು ಹಣಕ್ಕೆ ಬಿಕರಿಯಾದ ಆಟಗಾರರು ಉತ್ತಮ ಪ್ರದರ್ಶನ ನೀಡಲು ವಿಫಲರಾದ ಉದಾಹರಣೆಗಳೂ ಇವೆ.

ಯುವರಾಜ್ ಸಿಂಗ್ : ಸಿಕ್ಸರ್ ಕಿಂಗ್ ಅಂತಾನೇ ಫೇಮಸ್ ಆಗಿರೋ ಯುವರಾಜ್ ಸಿಂಗ್ ಐಪಿಎಲ್ ಮೊದಲ ಆವೃತ್ತಿಯಲ್ಲಿ 15 ಕೋಟಿ ರೂಪಾಯಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಹರಾಜಾಗಿದ್ದರು. ಆದ್ರೆ ಆ ಸೀಸನ್ ನಲ್ಲಿ 14 ಪಂದ್ಯಗಳಿಂದ ಕೇವಲ 248 ರನ್ ಗಳಿಸಿದ್ದ ಯುವಿ ಫುಲ್ ಫ್ಲಾಪ್ ಆಗಿದ್ದರು. 2014ರಲ್ಲಿ 14 ಕೋಟಿಗೆ ಆರ್ ಸಿ ಬಿ ತಂಡ ಸೇರಿದ್ದ ಯುವರಾಜ್ ಆಗಲೂ ವಿಫಲರಾಗಿದ್ದರು. 2016ರಲ್ಲಿ ಹೈದ್ರಾಬಾದ್ ಸನ್ ರೈಸರ್ಸ್ ಪರ ಕಣಕ್ಕಿಳಿದಿದ್ದರು.

ದಿನೇಶ್ ಕಾರ್ತಿಕ್ : 2014ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ರನ್ನು 12.5 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತ್ತು. ಆದ್ರೆ ಕಾರ್ತಿಕ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲೇ ಇಲ್ಲ. 14 ಪಂದ್ಯಗಳಲ್ಲಿ ಕೇವಲ 325 ರನ್ ಗಳಿಸಿದ್ದರು.

ನಂತರ 10.5 ಕೋಟಿಗೆ ಕಾರ್ತಿಕ್ ಆರ್ ಸಿ ಬಿ ಸೇರಿದ್ರು. ಅಲ್ಲಿ ಕೂಡ 16 ಮ್ಯಾಚ್ ಗಳಿಂದ ಕಾರ್ತಿಕ್ ಬಾರಿಸಿದ್ದು ಬರೀ 141 ರನ್ ಮಾತ್ರ. ಕಳೆದ 2 ಆವೃತ್ತಿಗಳಲ್ಲಿ ದಿನೇಶ್ ಕಾರ್ತಿಕ್ ಗುಜರಾತ್ ಲಯನ್ಸ್ ಪರ ಕಣಕ್ಕಿಳಿದಿದ್ದರು.

ಪವನ್ ನೇಗಿ : 8.5 ಕೋಟಿ ರೂಪಾಯಿಗೆ ಪವನ್ ನೇಗಿಯನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಖರೀದಿಸಿತ್ತು. ಆದ್ರೆ ಆಲ್ ರೌಂಡರ್ ನೇಗಿ ನಿರೀಕ್ಷೆಗೆ ತಕ್ಕ ಆಟವಾಡಲೇ ಇಲ್ಲ. ಬರೀ 57 ರನ್ ಗಳಿಸಿದ್ರು. ಬೌಲಿಂಗ್ ನಲ್ಲೂ ಮ್ಯಾಜಿಕ್ ಮಾಡಲಿಲ್ಲ.

ಕೆವಿನ್ ಪೀಟರ್ಸನ್ : 2014ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸ್ಟೈಲಿಶ್ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್ ಅವರನ್ನು 9 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆದ್ರೆ ಪೀಟರ್ಸನ್ ಬ್ಯಾಟಿಂಗ್ ಪ್ರದರ್ಶನ ಮಾತ್ರ ನೀರಸವಾಗಿತ್ತು. 11 ಪಂದ್ಯಗಳಿಂದ ಅವರು ಕೇವಲ 294 ರನ್ ಗಳಿಸಿದ್ದರು.

ಆಂಡ್ರೂ ಪ್ಲಿಂಟಾಫ್ : ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಂಡ್ರೂ ಪ್ಲಿಂಟಾಫ್ ರನ್ನು ಆಯ್ಕೆ ಮಾಡಿಕೊಂಡು ಎಡವಿತ್ತು. 2009ರಲ್ಲಿ 7.5 ಕೋಟಿ ಪಡೆದು ಸಿಎಸ್ ಕೆ ಸೇರಿದ್ದ ಪ್ಲಿಂಟಾಫ್ ಕೇವಲ ಮೂರು ಪಂದ್ಯಗಳನ್ನ ಆಡಿದ್ರು. ನಂತರ ಗಾಯದ ಸಮಸ್ಯೆಯಿಂದ ಹೊರಗುಳಿಯಬೇಕಾಯ್ತು. ಗಳಿಸಿದ್ದು 62 ರನ್, ಪಡೆದಿದ್ದು ಕೇವಲ 2 ವಿಕೆಟ್. ಹೀಗೆ ಘಟಾನುಘಟಿ ಆಟಗಾರರೇ ಐಪಿಎಲ್ ನಲ್ಲಿ ವಿಫಲರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...