alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಜೊತೆ ಕಾಣಿಸಿಕೊಂಡ ಬೆಡಗಿಯ ಕುರಿತ ಕುತೂಹಲಕಾರಿ ಸುದ್ದಿ

ಸಧ್ಯ ಈಗ ಎಲ್ಲಿ ನೋಡಿದ್ರು ಐಪಿಎಲ್ ನದ್ದೇ ಹವಾ. ಈ ಬಾರಿ ಕಪ್ ನಮ್ದೆ, ಅಂತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೇಳ್ತಿದೆ. ಇತ್ತ ಈ ಬಾರಿಯ ಐಪಿಎಲ್ ಸರಣಿಯಲ್ಲಿ ಅತಿ ಹೆಚ್ಚು ಅಂಕ ಗಳಿಸೋ ಮೂಲಕ ಚೆನ್ನೈ ಟೀಂ ಟಾಪ್ ನಲ್ಲಿದೆ.

ಇನ್ನು ಚೆನ್ನೈ, ಆರ್ ಸಿ ಬಿ ತಂಡದ ಕ್ಯಾಪ್ಟನ್ ಗಳಿಗೆ ಮ್ಯಾಚ್ ನಡೆಯುವಾಗ ಅವರ ಪತ್ನಿಯರಿದ್ರೆ, ಫುಲ್ ಎನರ್ಜಿ ಇದ್ದಂತೆ ಅನ್ಸತ್ತೆ. ಧೋನಿ ತನ್ನ ಪತ್ನಿ ಸಾಕ್ಷಿ ನೋಡಿ, ಕೊಹ್ಲಿ, ಅನುಷ್ಕಾಳನ್ನ ನೋಡುತ್ತಿದ್ದಂತೆ ರನ್ ಮಳೆ ಸುರಿಸುತ್ತಾರೆ.

ಅಂತೆಯೇ ಚೆನ್ನೈ ತಂಡ ಯಾವ ಕ್ರೀಡಾಂಗಣದಲ್ಲಿ ಆಟವಾಡಿದ್ರೂ ಆ ತಂಡವನ್ನ ಚಿಯರ್ ಅಪ್ ಮಾಡೋಕೆ ಒಬ್ಬಳು ಹುಡುಗಿ ಇದ್ದೇ ಇರ್ತಾಳೆ. ಸೋಶಿಯಲ್ ಮೀಡಿಯಾಗಳಲೆಲ್ಲಾ ಅವಳದ್ದೇ ಚರ್ಚೆ ನಡೆಯುತ್ತಿದೆ. ಹಾಗಂತ ಅವಳು, ಸಾಕ್ಷಿ ಧೋನಿ ಅಂದ್ಕೊಂಡ್ರಾ. ಖಂಡಿತಾ ಅಲ್ಲ. ಆಕೆಯ ಹೆಸರು ಮಾಲತಿ ಚಾಹರ್..! ಹೌದು ಈಕೆ ಸಿ ಎಸ್ ಕೆ ತಂಡದ ಬೌಲರ್ ದೀಪಕ್ ಚಾಹರ್ ಸಹೋದರಿ.

ಈಕೆಯ ಮತ್ತೊಬ್ಬ ಸಹೋದರ ರಾಹುಲ್ ಚಾಹರ್ ಮುಂಬೈ ಇಂಡಿಯನ್ ತಂಡದಲ್ಲಿ ಆಡುತ್ತಿದ್ದ. ಆದ್ರೆ ಗಾಯದ ಸಮಸ್ಯೆಯಿಂದ ಈ ಸೀಸನ್ ನಲ್ಲಿ ರಾಹುಲ್ ಆಡ್ತಿಲ್ಲ. ಸಿ ಎಸ್ ಕೆ ತಂಡ ಈಗಾಗಲೇ ಆಡಿರುವ 8 ಪಂದ್ಯಗಳಲ್ಲಿ 6 ಪಂದ್ಯ ಗೆಲ್ಲುವ ಮೂಲಕ ಟಾಪ್ ಲಿಸ್ಟ್ ನಲ್ಲಿದೆ. ಕೆಲ ಸಮಸ್ಯೆಗಳಿಂದ ತನ್ನ ನೆಲ ಚೆನ್ನೈನಲ್ಲಿ ಈ ತಂಡ ಆಟವಾಡದಿದ್ರೂ, ಟಾಪ್ ನಲ್ಲಿದೆ. ಇದಕ್ಕೆಲ್ಲಾ ತಂಡಕ್ಕೆ ಜನರು ತುಂಬುವ ಉತ್ಸಾಹವೇ ಕಾರಣ.

ಆದ್ರೆ ಮಾಲತಿ ಚಾಹರ್ ಚೆನ್ನೈ ತಂಡವನ್ನು ಚಿಯರ್ ಅಪ್ ಮಾಡೋದ್ರಲ್ಲಿ ಫಸ್ಟ್ ಲಿಸ್ಟ್ ನಲ್ಲಿದ್ದಾರೆ. ಎಲ್ಲೇ ಆಟ ನಡೆದ್ರೂ ಅಲ್ಲಿಗೆ ಹೋಗಿ ತಂಡವನ್ನು ಹುರಿದುಂಬಿಸುತ್ತಾರೆ. ಹಾಗೆಯೇ ಈಕೆಯ ಇನ್ಸ್ಟಾಗ್ರಾಂ ತುಂಬಾ ಸಿ ಎಸ್ ಕೆ ತಂಡದ ಚಿತ್ರಗಳೇ ರಾರಾಜಿಸುತ್ತಿವೆ. ತನ್ನ ತಂಡದ ವೇಗದ ಬೌಲರ್ ದೀಪಕ್ ಸಹೋದರಿಯ ಈ ಉತ್ಸಾಹ, ನಾಯಕ ಧೋನಿಗೆ ತುಂಬಾ ಇಷ್ಟವಾಗುತ್ತಂತೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...