alex Certify
ಕನ್ನಡ ದುನಿಯಾ       Mobile App
       

Kannada Duniya

ಪಂದ್ಯ ಗೆದ್ದ ಬಳಿಕ ಅಜ್ಜಿಯನ್ನು ನೆನೆದು ಭಾವುಕನಾದ ಕ್ರಿಕೆಟಿಗ

ಈ ಬಾರಿಯ ಐಪಿಎಲ್ ಹಲವು ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಹರಾಜಿನ ವೇಳೆ ತಮ್ಮ ಹಿಂದಿನ ತಂಡದಿಂದ ನಿರ್ಲಕ್ಷಿಸಲ್ಪಟ್ಟಿದ್ದ ಕೆಲ ಕ್ರಿಕೆಟಿಗರು ಈ ಬಾರಿ ಅದ್ಬುತ ಪ್ರದರ್ಶನ ನೀಡುತ್ತಿದ್ದು, ಅವರುಗಳನ್ನು ಖರೀದಿಸದೆ ಕೈ ಬಿಟ್ಟಿದ್ದಕ್ಕೆ ಪ್ರಾಂಚೈಸಿಗಳು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ವಿದೇಶಿ ಆಟಗಾರರೂ ಐಪಿಎಲ್ ಪಂದ್ಯಾವಳಿಗಳಲ್ಲಿ ಕಮಾಲ್ ಮಾಡುತ್ತಿದ್ದು, ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಪಂಜಾಬ್ ತಂಡದ ಆಟಗಾರ ಆಸ್ಟ್ರೇಲಿಯಾದ ಆಂಡ್ರ್ಯೂ ಟೈ ಕೇವಲ 34 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಗಣನೀಯ ಕಾಣಿಕೆ ನೀಡಿದರು.

ಆಂಡ್ರ್ಯೂ ಪ್ರತಿ ವಿಕೆಟ್ ಪಡೆದಾಗಲು ತಮ್ಮ ತೋಳಿನಲ್ಲಿ ಧರಿಸಿದ್ದ ‘ಗ್ರಾಂಡ್ ಮಾ’ ಎಂಬ ಬ್ಯಾಂಡ್ ನ್ನು ಚುಂಬಿಸಿ ಹರ್ಷ ವ್ಯಕ್ತಪಡಿಸುತ್ತಿದ್ದರು. ಆಂಡ್ರ್ಯೂ ತಮ್ಮ ಈ ಸಾಧನೆಗಾಗಿ ಪರ್ಪಲ್ ಕ್ಯಾಪ್ ಗೆ ಭಾಜನರಾದರು. ಪಂದ್ಯದ ಬಳಿಕ ತಾವು ತೋಳಿಗೆ ಬ್ಯಾಂಡ್ ಧರಿಸಿದ್ದ ಕಾರಣ ಬಿಚ್ಚಿಟ್ಟ ಅವರು, ಇಂದು ತಮ್ಮ ಅಜ್ಜಿ ಸಾವಿಗೀಡಾಗಿದ್ದಾರೆ. ಅವರ ಗೌರವಾರ್ಥ ಪಟ್ಟಿ ಧರಿಸಿದ್ದಾಗಿ ಹೇಳಿ ಭಾವುಕರಾದರಲ್ಲದೇ ತಮ್ಮ ಇಂದಿನ ಸಾಧನೆಯನ್ನು ಅವರಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...