alex Certify
ಕನ್ನಡ ದುನಿಯಾ       Mobile App
       

Kannada Duniya

ರಾಯಲ್ಸ್ ಎದುರು ಮುಗ್ಗರಿಸಿದ ಆರ್.ಸಿ.ಬಿ.

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಎದುರು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ತಂಡ 19 ರನ್ ಗಳಿಂದ ಸೋಲು ಕಂಡಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ರಾಜಸ್ತಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 45 ಎಸೆತಗಳಲ್ಲಿ 2 ಬೌಂಡರಿ, 10 ಸಿಕ್ಸರ್ ಒಳಗೊಂಡ ಅಜೇಯ 92 ರನ್ ಗಳಿಸಿದರು. ಅಜಿಂಕ್ಯಾ ರೆಹಾನೆ 36, ಡಿ’ಆರ್ಸಿ ಶಾರ್ಟ್ 11, ಸಂಜು ಸ್ಯಾಮ್ಸನ್ ಅಜೇಯ 92, ಬೆನ್ ಸ್ಟೋಕ್ಸ್ 27, ಜೋಸ್ ಬಟ್ಲರ್ 23, ರಾಹುಲ್ ತ್ರಿಪಾಠಿ ಅಜೇಯ 14 ರನ್ ಗಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಪರವಾಗಿ ಕ್ರಿಸ್ ವೋಕ್ಸ್ 2, ಯಜುವೇಂದ್ರ ಚಾಹಲ್ 2 ವಿಕೆಟ್ ಪಡೆದರು.

218 ರನ್ ಗೆಲುವಿನ ಗುರಿ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಬ್ರೆಂಡನ್ ಮೆಕಲಮ್ 4, ಕ್ವಿಂಟಾನ್ ಡಿಕಾಕ್ 26, ವಿರಾಟ್ ಕೊಹ್ಲಿ 57, ಎ.ಬಿ. ಡಿವಿಲಿಯರ್ಸ್ 20, ಮನ್ ದೀಪ್ ಸಿಂಗ್ ಅಜೇಯ 47, ಪವನ್ ನೇಗಿ 3, ವಾಷಿಂಗ್ಟನ್ ಸುಂದರ್ 35, ಕ್ರಿಸ್ ವೊಕ್ಸ್ ಅಜೇಯ 0 ರನ್ ಗಳಿಸಿದರು. 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದ ಆರ್.ಸಿ.ಬಿ. 19 ರನ್ ಅಂತರದಿಂದ ಸೋಲು ಕಂಡಿದೆ. ರಾಜಸ್ತಾನ ರಾಯಲ್ಸ್ ಪರವಾಗಿ ಡಿ’ಆರ್ಸಿ ಶಾರ್ಟ್ 1, ಕೆ. ಗೌತಮ್ 1, ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...