alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ 11 ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ-ಮುಂಬೈ ಹಣಾಹಣಿ

ಐಪಿಎಲ್ 11ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಎಪ್ರಿಲ್ 7ರಂದು ವಾಂಖೆಡೆ ಮೈದಾನದಲ್ಲಿ ಐಪಿಎಲ್ ಗೆ ಚಾಲನೆ ಸಿಗಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.

ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ತಂಡಗಳ ನಡುವೆ ಎರಡನೇ ಪಂದ್ಯ ನಡೆಯಲಿದೆ. ಜಗತ್ತಿನ ಅತ್ಯಂತ ಜನಪ್ರಿಯ ಟಿ-20 ಟೂರ್ನಿ ಎನಿಸಿಕೊಂಡಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಈ ಬಾರಿ 51 ದಿನಗಳ ಕಾಲ ನಡೆಯಲಿದೆ.

ಒಟ್ಟು 9 ಸ್ಥಳಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗ್ತಿದೆ. ಚೆನ್ನೈ, ಜೈಪುರ, ಇಂದೋರ್ ಮತ್ತು ಮೊಹಾಲಿಯಲ್ಲೂ ಪಂದ್ಯಗಳು ನಡೆಯಲಿವೆ. 12 ಪಂದ್ಯಗಳು ಮಧ್ಯಾಹ್ನ 4 ಗಂಟೆಗೆ ಆರಂಭವಾದ್ರೆ, 48 ಪಂದ್ಯಗಳು ರಾತ್ರಿ 8ಕ್ಕೆ ಶುರುವಾಗಲಿವೆ. ಐಪಿಎಲ್ ಆವೃತ್ತಿಯ ಕೊನೆಯ ಪಂದ್ಯವನ್ನು ಮೇ 27ರಂದು ಭಾನುವಾರ ಆಯೋಜಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...