alex Certify
ಕನ್ನಡ ದುನಿಯಾ       Mobile App
       

Kannada Duniya

3ನೇ ಬಾರಿ ಚೆನ್ನೈ ಮಡಿಲಿಗೆ ಚಾಂಪಿಯನ್ ಪಟ್ಟ

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್, ಹೈದ್ರಾಬಾದ್ ಮಣಿಸಿರುವ ಧೋನಿ ಪಡೆ ಮೂರನೇ ಬಾರಿ ಕಪ್ ಎತ್ತಿ ಹಿಡಿದಿದೆ. ಹೈದ್ರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದ ಚೆನ್ನೈ ಐಪಿಎಲ್ -11ನ್ನು ತನ್ನ ಕೈ ವಶ ಮಾಡಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಗಿಳಿದ ಹೈದ್ರಾಬಾದ್ ತಂಡ 20 ಓವರ್ ಗೆ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಶೇನ್ ವಾಟ್ಸನ್ ಬಿರುಗಾಳಿ ಆಟ ತಂಡದ ಗೆಲುವಿಗೆ ಕಾರಣವಾಯ್ತು. 57 ಬೌಲಿಗೆ 117 ರನ್ ಗಳಿಸಿದ ವಾಟ್ಸನ್ ಫೈನಲ್ ನಲ್ಲಿ ಅಬ್ಬರಿಸಿದ್ರು.

ಚಾಂಪಿಯನ್ ಆಗಿ ಹೊರ ಹೊಮ್ಮಿದ ಚೆನ್ನೈಗೆ ಹಣದ ಹೊಳೆ ಹರಿದಿದೆ. ತಂಡಕ್ಕೆ 20 ಕೋಟಿ ರೂಪಾಯಿ ಸಿಕ್ಕಿದೆ. ಫೈನಲ್ ನಲ್ಲಿ ಸೋಲುಂಡ ತಂಡಕ್ಕೆ 12.5 ಕೋಟಿ ರೂಪಾಯಿ ಸಿಕ್ಕಿದೆ. ಆರೆಂಜ್ ಕ್ಯಾಪ್ ಪಡೆದ ವಿಲಿಯಂ ಸನ್ ಗೆ 10 ಲಕ್ಷ ರೂಪಾಯಿ ನೀಡಲಾಗಿದೆ. ಆಂಡ್ರ್ಯೂ ಟೈ ಪರ್ಪಲ್ ಕ್ಯಾಪ್ ಪಡೆದು 10 ಲಕ್ಷ ಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...