alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಆರ್ ಸಿ ಬಿ ಅಭಿಮಾನಿಯ ಈ ಟ್ವೀಟ್…!

2018 ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆರ್ ಸಿ ಬಿ ತಂಡದ ಕಳಪೆ ಪ್ರದರ್ಶನಕ್ಕೆ, ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧ ಕೊನೆ ಹಂತದಲ್ಲಿ ಸೋಲು ಅನುಭವಿಸಿದ್ದು, ಆರ್ ಸಿ ಬಿ ಫ್ಯಾನ್ಸ್ ಗೆ ಮತ್ತಷ್ಟು ನೋವುಂಟು ಮಾಡಿದೆ.

ಸದ್ಯ ಅಭಿಮಾನಿಗಳು ಟಾಪ್ 4 ನಲ್ಲಿ ಯಾವ ತಂಡ ಬರಲಿದೆ ಎಂದು ಎದುರು ನೋಡ್ತಿದ್ದಾರೆ. 10 ಮ್ಯಾಚ್ ಗಳಲ್ಲಿ ಕೇವಲ 3 ಮ್ಯಾಚ್ ಗೆದ್ದಿರುವ ಆರ್ ಸಿ ಬಿ ಈಗಲೂ ಪ್ಲೇ ಆಫ್ ನಲ್ಲಿ ಆಡಲು ಹೇಗೆ ಅರ್ಹತೆ ಪಡೆಯಬಹುದು ಎಂಬುದನ್ನ ಒಬ್ಬ ಅಭಿಮಾನಿ ಲೆಕ್ಕಾಚಾರ ಹಾಕಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾನೆ. ಈ ಟ್ವೀಟ್ ಮೆಸೇಜ್ ಈಗ ವೈರಲ್ ಆಗಿದೆ.

ಮೂರು ಪಂದ್ಯಗಳನ್ನು ಗೆದ್ದಿರುವ ಆರ್ ಸಿ ಬಿ ಗೆ ಇನ್ನುಳಿದ ನಾಲ್ಕು ಪಂದ್ಯಗಳನ್ನು ಗೆದ್ದಲ್ಲಿ, ತಂಡದ ರನ್ ರೇಟ್ ಉತ್ತಮವಾಗಲಿದೆ ಎಂದು ಆ ಅಭಿಮಾನಿ ತಿಳಿಸಿದ್ದಾನೆ. ಶ್ರೀಹರಿ ರಾಮನ್ ಎಂಬ ಟ್ವಿಟ್ಟರ್ ಅಕೌಂಟ್ ನಲ್ಲಿ ಈ ಲೆಕ್ಕಾಚಾರದ ಚಿತ್ರ ಹರಿದಾಡ್ತಿದೆ. ಆದ್ರೆ ಈ ಲೆಕ್ಕಾಚಾರವನ್ನು ನಿಜವಾಗಿಯೂ ಮಾಡಿದ್ಯಾರು ಎಂಬುದು ತಿಳಿದಿಲ್ಲ.

ಈ ಟ್ವೀಟ್ ಲೆಕ್ಕಾಚಾರದ ಪ್ರಕಾರ ನೋಡೋದಾದ್ರೆ, ಮುಂದಿರುವ ನಾಲ್ಕೂ ಪಂದ್ಯಗಳನ್ನು ಆರ್ ಸಿ ಬಿ ಗೆದ್ದರೆ ನಾಲ್ಕನೇ ಸ್ಥಾನವನ್ನು ಗಳಿಸಲಿದೆ. ಅಂತೆಯೇ ತಂಡದ ರನ್ ರೇಟ್ ಕೂಡಾ ಹೆಚ್ಚಲಿದೆ. ಆಗ ಆರ್ ಸಿ ಬಿ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆಯಬಹುದು ಎಂಬ ಆಶಾವಾದ ವ್ಯಕ್ತಪಡಿಸಲಾಗಿದೆ. ಮುಂಬೈ ಇಂಡಿಯನ್ಸ್, ನಾಲ್ಕರಲ್ಲಿ ಎರಡು ಪಂದ್ಯ, ಕೆಕೆಆರ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಕೇವಲ ಒಂದೊಂದು ಪಂದ್ಯ ಗೆದ್ದರೆ ಸಾಕು , ಇವು ಪ್ಲೇ ಆಫ್ ಹಂತ ತಲುಪಲಿವೆ.

ಸದ್ಯ ಸನ್ ರೈಸರ್ಸ್ ಹೈದ್ರಾಬಾದ್ ಟಾಪ್ ಲಿಸ್ಟ್ ನಲ್ಲಿದೆ. ಇದರ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...