alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದ್ರಾಬಾದ್ ಮಣಿಸಿ ಧೋನಿ ಟೀಂ 3ನೇ ಬಾರಿ ಆಗಲಿದ್ಯಾ ಚಾಂಪಿಯನ್ ?

ಐಪಿಎಲ್ 11ರ 59 ಪಂದ್ಯಗಳ ನಂತ್ರ ಪಂದ್ಯಾವಳಿಯಲ್ಲಿ ಸರ್ವಶ್ರೇಷ್ಠ 2 ತಂಡಗಳು ಯಾವುದು ಎಂಬುದು ನಿರ್ಧಾರವಾಗಿವೆ. ಮೇ. 27 ರಂದು ವಾಂಖೆಡೆಯಲ್ಲಿ ಅಂತಿಮ ಹಣಾಹಣಿ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ಪ್ರಶಸ್ತಿಗಾಗಿ ಸೆಣೆಸಾಡಲಿವೆ.

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ಬಲ ಒಂದೇ ರೀತಿಯಲ್ಲಿದೆ. ಎರಡು ತಂಡಗಳ ಮಧ್ಯೆ ಸಮಬಲ ಫೈಟ್ ನಡೆಯಲಿದೆ. ಐಪಿಎಲ್ 9 ಸರಣಿಯಲ್ಲಿ ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ 7 ಬಾರಿ ಫೈನಲ್ ಪ್ರವೇಶ ಮಾಡಿದೆ. 2010 ಹಾಗೂ 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಹೈದ್ರಾಬಾದ್ 2015ರಿಂದ ಐಪಿಎಲ್ ಗೆ ಪ್ರವೇಶ ಪಡೆದಿದ್ದು, ಇನ್ನು 2016ರಲ್ಲಿ ಚಾಂಪಿಯನ್ ಆಗಿದ್ದ ಹೈದ್ರಾಬಾದ್ ತಂಡ ಎರಡನೇ ಬಾರಿ ಫೈನಲ್ ಪ್ರವೇಶ ಮಾಡಿದೆ. ಪ್ರಸ್ತುತ ಸರಣಿಯಲ್ಲಿ ಚೆನ್ನೈ ಹಾಗೂ ಹೈದ್ರಾಬಾದ್ ಮೂರು ಬಾರಿ ಮುಖಾಮುಖಿಯಾಗಿವೆ. ಮೂರೂ ಪಂದ್ಯದಲ್ಲಿ ಚೆನ್ನೈ ಗೆಲುವು ಸಾಧಿಸಿದೆ.

ವಾಖೆಂಡೆ ಮೈದಾನ ಇಬ್ಬರಿಗೂ ತಟಸ್ಥವೆಂದ್ರೆ ತಪ್ಪಾಗಲಾರದು. ಧೋನಿ ಪಡೆ ಇಲ್ಲಿ 12 ಪಂದ್ಯಗಳನ್ನಾಡಿದ್ದು, ಅದ್ರಲ್ಲಿ 6 ಪಂದ್ಯಗಳಲ್ಲಿ  ಜಯ ಸಾಧಿಸಿದೆ. ಹೈದ್ರಾಬಾದ್ ಟೀಂ ಐದು ಪಂದ್ಯಗಳನ್ನಾಡಿದ್ದು ಅವುಗಳಲ್ಲಿ ಒಂದು ಗೆಲುವು ಸಾಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...