alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳಿಗೆ ಪ್ರಾಮಿಸ್ ಮಾಡಿದ ಕೊಹ್ಲಿ

kohli

ಐಪಿಎಲ್ 10ನೇ ಆವೃತ್ತಿಯಲ್ಲಿ ಆರ್ ಸಿ ಬಿ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಕೊಹ್ಲಿ ಪಡೆ ನೀರಸ ಪ್ರದರ್ಶನ ತೋರಿದೆ. ಟೀಂ ಪಟ್ಟಿಯಲ್ಲೂ ಆರ್ ಸಿ ಬಿ ಕೊನೆಯಲ್ಲಿದೆ. ತಮ್ಮ ತಂಡದ ಸಾಧನೆ ಬಗ್ಗೆ ವಿರಾಟ್ ಕೊಹ್ಲಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಟ್ವೀಟರ್ ನಲ್ಲಿ ಬೇಸರ ವ್ಯಕ್ತಪಡಿಸಿರುವ ಕೊಹ್ಲಿ ಮುಂದಿನ ಆವೃತ್ತಿಯ ಬಗ್ಗೆ ಭರವಸೆ ನೀಡಿದ್ದಾರೆ. ಪ್ರಬಲ ತಂಡವಾಗಿ ವಾಪಸ್ ಆಗುವುದಾಗಿ ಕೊಹ್ಲಿ ಪ್ರಾಮಿಸ್ ಮಾಡಿದ್ದಾರೆ.

ಐಪಿಎಲ್ 10ನೇ ಆವೃತ್ತಿಯಲ್ಲಿ ಕೊಹ್ಲಿ ಪ್ರದರ್ಶನ ಕೂಡ ಚೆನ್ನಾಗಿರಲಿಲ್ಲ. 10 ಪಂದ್ಯಗಳನ್ನಾಡಿರುವ ಕೊಹ್ಲಿ 308 ರನ್ ಗಳಿಸಿದ್ದಾರೆ. ಹಿಂದಿನ ಆವೃತ್ತಿಯಲ್ಲಿ 16 ಪಂದ್ಯಗಳನ್ನಾಡಿದ್ದ ಕೊಹ್ಲಿ 973 ರನ್ ಗಳಿಸಿದ್ದರು. ಈ ಋತುವಿನಲ್ಲಿ ಎಷ್ಟು ಪ್ರೀತಿ, ಪ್ರೋತ್ಸಾಹ ಸಿಕ್ಕಿದೆಯೋ ಅದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ಆವೃತ್ತಿಯಲ್ಲಿ ಸದೃಢರಾಗಿ ನಾವು ಮೈದಾನಕ್ಕಿಳಿಯುತ್ತೇವೆಂದು ಕೊಹ್ಲಿ ಟ್ವಿಟ್ ಮಾಡಿದ್ದಾರೆ.

ಟ್ವಿಟ್ ಜೊತೆಗೆ ಕೊಹ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ನಾನು ಅನೇಕ ದಿನಗಳಿಂದ ಇದನ್ನು ಹೇಳ ಬಯಸಿದ್ದೆ. ಅನೇಕ ಅಭಿಮಾನಿಗಳು ಹಾಗೂ ಆಟಗಾರರು ನಮ್ಮ ಪ್ರದರ್ಶನದಿಂದ ನಿರಾಸೆಗೊಂಡಿದ್ದಾರೆ. ಆದ್ರೂ ಯಾವುದೇ ಷರತ್ತಿಲ್ಲದೆ ನಮ್ಮನ್ನು ಪ್ರೀತಿ ಮಾಡಿದ್ದಾರೆ ಪ್ರೋತ್ಸಾಹಿಸಿದ್ದಾರೆ. ಅದಕ್ಕೆ ಧನ್ಯವಾದ ಎಂದಿದ್ದಾರೆ ಕೊಹ್ಲಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...