alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷದ ಹಿಂದೆ ಹೋಟೆಲ್ ನಲ್ಲಿ ವೇಯ್ಟರ್, ಈಗ….

kulwant-khejroliya-mi_806x605_41495165401

ಮುಂಬೈ ಇಂಡಿಯನ್ಸ್ ತಂಡದಲ್ಲಿ ವಿಶ್ವದ ದಿಗ್ಗಜ ಕ್ರಿಕೆಟಿಗರಿದ್ದಾರೆ. ಇದು ಅತ್ಯಂತ ಶ್ರೀಮಂತ ತಂಡವೂ ಹೌದು. ಮಹೇಲಾ ಜಯವರ್ಧನೆ ತಂಡದ ಕೋಚ್ ಆಗಿದ್ರೆ, ಸಚಿನ್ ತೆಂಡೂಲ್ಕರ್ ಮೆಂಟರ್. ಆದ್ರೆ ಜನಪ್ರಿಯ ಕ್ರಿಕೆಟಿಗರ ನಡುವೆಯೂ ಎಲೆಮರೆ ಕಾಯಿಯಂತಿದ್ದ ಆಟಗಾರರು ಮುಂಬೈ ಇಂಡಿಯನ್ಸ್ ತಂಡದ ಮೂಲಕ ಪ್ರಖ್ಯಾತಿಗೆ ಬಂದಿದ್ದಾರೆ.

ಕುಲ್ವಂತ್ ಖೇಜ್ರೊಲಿಯಾ ಕೂಡ ಅವರಲ್ಲಿ ಒಬ್ಬರು. ಇವರು ಕ್ರಿಕೆಟ್ ಜಗತ್ತಿಗೆ ಕಾಲಿಟ್ಟಿದ್ದು ಕೇವಲ ಒಂದು ವರ್ಷದ ಹಿಂದೆ. ಅದಕ್ಕೂ ಮುನ್ನ ಕುಲ್ವಂದ ಗೋವಾದ ರೆಸ್ಟೋರೆಂಟ್ ಒಂದರಲ್ಲಿ ವೇಯ್ಟರ್ ಆಗಿದ್ರು. ಕ್ರಿಕೆಟ್ ಅನ್ನೇ ವೃತ್ತಿಯನ್ನಾಗಿ ಆಯ್ದುಕೊಳ್ಳಬೇಕು ಅನ್ನೋ ಆಸೆಯಿಂದ ಕುಲ್ವಂತ್ ದೆಹಲಿಗೆ ಬಂದಿದ್ರು.

ಅವರಲ್ಲಿದ್ದ ಪ್ರತಿಭೆಯನ್ನು ಸ್ನೇಹಿತನೊಬ್ಬ ಗುರುತಿಸಿದ್ದ. ತಾನು ಕ್ರಿಕೆಟ್ ಆಡುವ ಸಲುವಾಗಿ ದೆಹಲಿಗೆ ಹೋಗುತ್ತಿದ್ದೇನೆಂದು ಕುಲ್ವಂತ್ ಹೇಳಿರಲಿಲ್ಲ. ಆತ ಸ್ನೇಹಿತನ ಉದ್ಯಮಕ್ಕೆ ಜೊತೆಯಾಗಲು ಅಹಮದಾಬಾದ್ ಗೆ ಹೋಗಿದ್ದಾನೆ ಅಂತಾ ಹೆತ್ತವರು ಭಾವಿಸಿದ್ರು. ದೆಹಲಿಯ ಎಲ್ ಬಿ ಶಾಸ್ತ್ರಿ ಕ್ಲಬ್ ಸೇರಿದ ಕುಲ್ವಂತ್ ಗೆ ಸಂಜಯ್ ಭಾರದ್ವಾಜ್ ಮೆಂಟರ್ ಆಗಿ ದೊರೆತಿದ್ರು. ಕುಲ್ವಂತ್ ಒಬ್ಬ ಅತ್ಯುತ್ತಮ ಎಡಗೈ ವೇಗಿಯಾಗಿ ರೂಪುಗೊಳ್ಳೋದ್ರಲ್ಲಿ ಅವರ ಕೊಡುಗೆಯೂ ಇದೆ.

2017ರ ಬಿಡ್ಡಿಂಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ 10 ಲಕ್ಷ ರೂಪಾಯಿಗೆ ಕುಲ್ವಂತ್ ರನ್ನು ಖರೀದಿ ಮಾಡಿತ್ತು. ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪರ ಆಡುವ ಮೂಲಕ ಕುಲ್ವಂತ್ ರಣಜಿಗೆ ಪದಾರ್ಪಣೆ ಮಾಡಿದ್ದಾರೆ. ಆದ್ರೆ ಇದುವರೆಗೂ ಐಪಿಎಲ್ ನಲ್ಲಿ ಆಡುವ ಅವಕಾಶ ಅವರಿಗೆ ಸಿಕ್ಕಿಲ್ಲ. ಕೆಕೆಆರ್ ತಂಡವನ್ನು ಮಣಿಸಿ ಮುಂಬೈ ಫೈನಲ್ ಪ್ರವೇಶಿಸಿದ್ರೆ ಅಲ್ಲಿ ಆಡುವ ಅವಕಾಶ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ ಈ ಪ್ರತಿಭಾವಂತ ಆಟಗಾರ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...