alex Certify
ಕನ್ನಡ ದುನಿಯಾ       Mobile App
       

Kannada Duniya

ಅವಮಾನಕರ ದಾಖಲೆ: ಕೊಹ್ಲಿ ವೃತ್ತಿ ಜೀವನಕ್ಕೆ ಕಪ್ಪುಚುಕ್ಕಿ

images

ಸೋಲು ಆರ್ ಸಿ ಬಿ ತಂಡದ ನಾಯಕ ವಿರಾಟ್ ಕೊಹ್ಲಿ ಬೆನ್ನುಹತ್ತಿದೆ. ಐಪಿಎಲ್ 10ನೇ ಆವೃತ್ತಿಯಲ್ಲಿ ಕೊಹ್ಲಿ ನಾಯಕತ್ವದ ಆರ್ ಸಿ ಬಿ ತಂಡ ಸೋಲಿನ ಮೇಲೆ ಸೋಲು ಅನುಭವಿಸುತ್ತಿದೆ. ಈವರೆಗೆ ಆಡಿರುವ 12 ಪಂದ್ಯಗಳಲ್ಲಿ 9 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ ಕೊಹ್ಲಿ.

ಈ ಆವೃತ್ತಿಯಲ್ಲಿ ಈವರೆಗೆ ಕೊಹ್ಲಿ 8 ಪಂದ್ಯಗಳನ್ನಾಡಿದ್ದಾರೆ. ಅದ್ರಲ್ಲಿ ಗೆಲುವಿನ ನಗೆ ಬೀರಿದ್ದು ಕೇವಲ 1 ಪಂದ್ಯದಲ್ಲಿ ಮಾತ್ರ. ಶುಕ್ರವಾರ ಕೂಡ ಬೆಂಗಳೂರಿನಲ್ಲಿ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ ಸಿ ಬಿ ಸೋಲು ಕಂಡಿದೆ. ಇದು ವಿರಾಟ್ ಕೊಹ್ಲಿ ಕ್ರಿಕೆಟ್ ವೃತ್ತಿಯಲ್ಲಿ ಅತ್ಯಂತ ಕೆಟ್ಟ ದಾಖಲೆಯಾಗಿದೆ.

2008 ರಿಂದ 2017 ರವರೆಗೂ ಆರ್ ಸಿ ಬಿ ತಂಡದ ಸದಸ್ಯರಾಗಿದ್ದಾರೆ ಕೊಹ್ಲಿ. ವಿರಾಟ್ ಕೊಹ್ಲಿ ಒಟ್ಟು 147 ಪಂದ್ಯಗಳನ್ನಾಡಿದ್ದಾರೆ. ಇದ್ರಲ್ಲಿ 72 ಪಂದ್ಯಗಳಲ್ಲಿ ಕೊಹ್ಲಿ ಸೋಲು ಕಂಡಿದ್ದಾರೆ. ಐಪಿಎಲ್ ನಲ್ಲಿ ಯಾವುದೇ ಆಟಗಾರ ಒಂದೇ ಟೀಂನಲ್ಲಿ ಆಟವಾಡಿ ಇಷ್ಟು ಸೋಲು ಕಂಡಿಲ್ಲ. ಎಲ್ಲ ತಂಡ ಹಾಗೂ ಪಂದ್ಯಗಳನ್ನು ಲೆಕ್ಕಕ್ಕೆ ಪಡೆದಲ್ಲಿ ಅತಿ ಹೆಚ್ಚು ಸೋಲು ಕಂಡ ಆಟಗಾರ ರಾಬಿನ್ ಉತ್ತಪ್ಪ.

ಸದ್ಯ ಕೆಕೆಆರ್ ತಂಡದಲ್ಲಿರುವ ಉತ್ತಪ್ಪ ಮುಂಬೈ, ಬೆಂಗಳೂರು, ಪುಣೆ ಹಾಗೂ ಕೋಲ್ಕತ್ತಾ ಪರ ಆಟವಾಡಿದ್ದಾರೆ. ಐಪಿಎಲ್ ನಲ್ಲಿ ಒಟ್ಟು 145 ಪಂದ್ಯಗಳನ್ನು ಆಡಿರುವ ಉತ್ತಪ್ಪ 75 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.

ಇನ್ನು ಅತಿ ಹೆಚ್ಚು ಬಾರಿ ಸೋಲು ಕಂಡ ತಂಡದ ಪಟ್ಟಿಯಲ್ಲಿ ಡೆಲ್ಲಿ ಟೀಂ ಮುಂದಿದೆ. 2008-2017 ರವರೆಗೆ 10 ಆವೃತ್ತಿಯಲ್ಲಿ ಡೆಲ್ಲಿ 146 ಪಂದ್ಯಗಳನ್ನಾಡಿದ್ದು, 81 ಪಂದ್ಯಗಳಲ್ಲಿ ಸೋತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...