alex Certify
ಕನ್ನಡ ದುನಿಯಾ       Mobile App
       

Kannada Duniya

ಪುಣೆ ವಿರುದ್ಧ ರೋಚಕ ಗೆಲುವು: ಮುಂಬೈಗೆ IPL ಟ್ರೋಫಿ

mi-champion

ಹೈದರಾಬಾದ್: ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಒಂದೇ ಒಂದು ರನ್ ಅಂತರದಲ್ಲಿ ಜಯಗಳಿಸಿದ ಮುಂಬೈ ಇಂಡಿಯನ್ಸ್ 3 ನೇ ಬಾರಿಗೆ ಐ.ಪಿ.ಎಲ್. ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಫೈನಲ್ ನಲ್ಲಿ ಮೊದಲಿಗೆ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಬ್ಯಾಟಿಂಗ್ ಆಯ್ದುಕೊಂಡರು.

ಆದರೆ ಅವರ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಬೌಲರ್ ಗಳು ಪಾರಮ್ಯ ಮೆರೆದರು.

ಪಂದ್ಯದ 4 ನೇ ಓವರ್ ನಲ್ಲೇ ಪುಣೆಯ ಜಯದೇವ್ ಮುಂಬೈಗೆ ಆಘಾತ ನೀಡಿದರು. ಪಾರ್ಥಿವ್ ಪಟೇಲ್, ಲಿಂಡೆನ್ ಸಿಮನ್ಸ್ ವಿಕೆಟ್ ಪಡೆದರು. ಅಂಬಾಟಿ ರಾಯುಡು 12, ರೋಹಿತ್ ಶರ್ಮ 24, ಕೃನಾಲ್ ಪಾಂಡ್ಯ 47, ಕೀರನ್ ಪೊಲಾರ್ಡ್ 7, ಹಾರ್ದಿಕ್ ಪಾಂಡ್ಯ 10, ಮಿಚೆಲ್ ಜಾನ್ಸನ್ 13 ರನ್ ಗಳಿಸಿದ್ದು, ಅಂತಿಮವಾಗಿ ಮುಂಬೈ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತು. ಪುಣೆ ಪರ ಜಯದೇವ್ ಉನಾದ್ಕತ್ 2, ಆದಮ್ ಜಂಪ 2, ಡೇನಿಯಲ್ ಕ್ರಿಸ್ಟಿಯನ್ 2 ವಿಕೆಟ್ ಪಡೆದರು.

130 ರನ್ ಗೆಲುವಿನ ಗುರಿ ಬೆನ್ನತ್ತಿದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಪರವಾಗಿ ಅಜಿಂಕ್ಯಾ ರೆಹಾನೆ 44, ರಾಹುಲ್ ತ್ರಿಪಾಠಿ 3, ಮಹೇಂದ್ರ ಸಿಂಗ್ ಧೋನಿ 10 ರನ್, ಸ್ಟೀವನ್ ಸ್ಮಿತ್ 51, ಮನೋಜ್ ತಿವಾರಿ 7, ಡೇನಿಯಲ್ ಕ್ರಿಸ್ಟಿಯನ್ 4 ರನ್ ಗಳಿಸಿದ್ದಾರೆ.

20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡ ಪುಣೆ 128 ರನ್ ಗಳಿಸಿ ಕೇವಲ 1 ರನ್ ಅಂತರದಿಂದ ಸೋಲು ಕಂಡಿತು. ಮುಂಬೈ ಪರವಾಗಿ ಜಸ್ ಪ್ರೀತ್ ಬೂಮ್ರಾ 2, ಮಿಚೆಲ್ ಜಾನ್ಸನ್ 3 ವಿಕೆಟ್ ಪಡೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...