alex Certify
ಕನ್ನಡ ದುನಿಯಾ       Mobile App
       

Kannada Duniya

ಬೆನ್ ಸ್ಟೋಕ್ಸ್ ಶತಕದಬ್ಬರಕ್ಕೆ ಸೋತ ಗುಜರಾತ್ ಲಯನ್ಸ್

ben-sto

ಪುಣೆ: ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಟೀಂ, ಗುಜರಾತ್ ಲಯನ್ಸ್ ವಿರುದ್ಧ 5 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ.

14.5 ಕೋಟಿ ರೂಪಾಯಿಗೆ ಸೇಲಾಗಿದ್ದ ಬೆನ್ ಸ್ಟೋಕ್ಸ್ 103 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ 19.5 ಓವರ್ ಗಳಲ್ಲಿ 161 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಬ್ರೆಂಡನ್ ಮೆಕಲಂ 45, ಇಶಾನ್ ಕಿಶನ್ 31 ರನ್ ಗಳಿಸಿದರೆ, ಪುಣೆ ಪರವಾಗಿ ತಾಹಿರ್ 3 ವಿಕೆಟ್ ಪಡೆದು ಗಮನ ಸೆಳೆದರು. ಪುಣೆ 162 ರನ್ ಗೆಲುವಿನ ಗುರಿಯೊಂದಿಗೆ ಆಟ ಆರಂಭಿಸಿ, 10 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಬೆನ್ ಸ್ಟೋಕ್ಸ್ ಮತ್ತು ಮಹೇಂದ್ರ ಸಿಂಗ್ ಧೋನಿ(26 ರನ್) 4 ನೇ ವಿಕೆಟ್ ಗೆ 76 ರನ್ ಜೊತೆಯಾಟವಾಡಿದ್ದು, ತಂಡದ ಮೊತ್ತ ಹೆಚ್ಚಲು ಕಾರಣವಾಯಿತು. ಅಂತಿಮವಾಗಿ 19.5 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಪುಣೆ ತಂಡ ಗೆಲುವಿನ ನಗೆ ಬೀರಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...