alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ಗೆದ್ದ ಖುಷಿಯಲ್ಲಿ ಬಟ್ಲರ್ ಮಾಡಿದ್ದಾರೆ ಇಂಥ ಕೆಲಸ

jose-buttler-instagram_806x605_61495428767

ನಿನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಒಂದು ರನ್ ನಿಂದ ಮಣಿಸಿ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿ ಗೆದ್ದುಕೊಂಡಿದೆ. ಈ ರೋಚಕ ಗೆಲುವಿನಿಂದಾಗಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಮತ್ತು ಫ್ರಾಂಚೈಸಿಗಳ ಸಂಭ್ರಮ ಮುಗಿಲುಮುಟ್ಟಿತ್ತು.

ಮೈದಾನದಲ್ಲಿ ಗೆದ್ದವರ ಸಂಭ್ರಮ ಜೋರಾಗಿದ್ರೆ, ಇತ್ತ ಇಂಗ್ಲೆಂಡ್ ನ ಜಾಸ್ ಬಟ್ಲರ್ ಗೆಲುವಿನ ಖುಷಿಯಲ್ಲಿ ಮೈಮರೆತುಬಿಟ್ಟಿದ್ರು. ಸಂತೋಷವನ್ನು ತಡೆಯಲಾಗದೆ ಬಟ್ಲರ್ ಏನ್ಮಾಡಿದ್ದಾರೆ ಗೊತ್ತಾ? ತಾವು ಉಟ್ಟಿದ್ದ ಟವೆಲ್ ಅನ್ನೇ ಬಿಚ್ಚಿಕೊಂಡು ಕುಣಿದಾಡಿದ್ದಾರೆ. ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಜಾಸ್ ಬಟ್ಲರ್ ಕೂಡ ಮುಂಬೈ ಇಂಡಿಯನ್ಸ್ ಪರ ಆಡ್ತಾರೆ. ಈ ಬಾರಿ ಇಂಟರ್ ನ್ಯಾಶನಲ್ ಕಮಿಟ್ ಮೆಂಟ್ ನಿಂದಾಗಿ ಟೂರ್ನಿಯನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದರು. ವಿಕೆಟ್ ಕೀಪರ್ ಹಾಗೂ ಸ್ಫೋಟಕ ಬ್ಯಾಟ್ಸ್ ಮನ್ ಜಾಸ್ ಬಟ್ಲರ್ ಅವರ ವಿಚಿತ್ರ ಸೆಲೆಬ್ರೇಶನ್ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...