alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಗಿದೆ ಐಪಿಎಲ್ ಪುಣೆ ತಂಡದ ಹೆಸರು

pune

ಎಪ್ರಿಲ್ 5ರಿಂದ ಆರಂಭವಾಗ್ತಾ ಇರೋ ಇಂಡಿಯನ್ ಪ್ರೀಮಿಯರ್ ಲೀಗ್ 10ನೇ ಆವೃತ್ತಿಗಾಗಿ ಪುಣೆ ತಂಡ ಭರ್ಜರಿ ಸಿದ್ಧತೆ ಮಾಡಿಕೊಳ್ತಾ ಇದೆ. ಹರಾಜು ಪ್ರಕ್ರಿಯೆಯಲ್ಲಿ ಹೊಸಬರನ್ನು ಖರೀದಿ ಮಾಡಿರುವ ಪುಣೆ ಫ್ರಾಂಚೈಸಿಗಳು, ನಾಯಕತ್ವದಿಂದ ಮಹೇಂದ್ರ ಸಿಂಗ್ ಧೋನಿಯನ್ನು ತೆಗೆದು ಹಾಕಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗೆ ಕ್ಯಾಪ್ಟನ್ಸಿ ಜವಾಬ್ಧಾರಿ ಕೊಟ್ಟಿದ್ದಾರೆ.

ಇದೀಗ ‘ರೈಸಿಂಗ್ ಪುಣೆ ಸೂಪರ್ ಜೈಂಟ್ಸ್’ ತಂಡದ ಹೆಸರನ್ನು ಕೂಡ ಬದಲಾವಣೆ ಮಾಡಿದ್ದಾರೆ. ತಂಡದ ಹೆಸರನ್ನು ‘ರೈಸಿಂಗ್ ಪುಣೆ ಸೂಪರ್ ಜೈಂಟ್’ ಅಂತಾ ಮಾಡಲಾಗಿದೆ. ಆದ್ರೆ ಇದರ ಹಿಂದೆ ಯಾವುದೇ ಮೂಢನಂಬಿಕೆಯಿಲ್ಲ ಅಂತಾ ತಂಡ ಹೇಳಿಕೊಂಡಿದೆ.

ಕೇವಲ 5-6 ಆಟಗಾರರು ಮಾತ್ರವಲ್ಲ, ಇಡೀ ತಂಡವೇ ಸೂಪರ್ ಜೈಂಟ್ ಅನ್ನೋ ಅರ್ಥದಲ್ಲಿ ಹೆಸರು ಬದಲಾವಣೆ ಮಾಡಿರೋದಾಗಿ ತಂಡದ ವಕ್ತಾರರು ತಿಳಿಸಿದ್ದಾರೆ. ಕಳೆದ ಬಾರಿ ಪುಣೆ ತಂಡ ನೀರಸ ಪ್ರದರ್ಶನ ನೀಡಿತ್ತು. 9 ಪಂದ್ಯಗಳನ್ನು ಸೋತು ಕೇವಲ 5ರಲ್ಲಿ ಗೆಲುವು ಸಾಧಿಸಿ 7ನೇ ಸ್ಥಾನ ಪಡೆದಿತ್ತು. ಈ ಬಾರಿ ಎಪ್ರಿಲ್ 6ರಂದು ಪುಣೆ ಸೂಪರ್ ಜೈಂಟ್  ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯ ಆಡಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...