alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಪಡೆಗೆ ನಿರಾಸೆ, ಸನ್ ರೈಸರ್ಸ್ ಚಾಂಪಿಯನ್

sunrisers

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ, ಇಂಡಿಯನ್ ಪ್ರೀಮಿಯರ್ ಲೀಗ್ 9ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ, ಸನ್ ರೈಸರ್ಸ್ ಹೈದರಾಬಾದ್ ಚಾಂಪಿಯನ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ರನ್ ಅಂತರದಿಂದ ಸೋಲು ಕಂಡಿದೆ.

ತೀವ್ರ ಹಣಾಹಣಿಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ, ಸನ್ ರೈಸರ್ಸ್ ಹೈದರಾಬಾದ್ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ, ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ, ಆರ್.ಸಿ.ಬಿ.ಗೆ ಕಠಿಣ ಸವಾಲಿನ ಗುರಿ ನೀಡಿತು. ಆರ್.ಸಿ.ಬಿ. ಕೊನೆಯವರೆಗೂ ಹೋರಾಟ ನಡೆಸಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಸೋಲು ಕಂಡಿತು. ಹೈದರಾಬಾದ್ ತಂಡದ ಪರ ಅಮೋಘ ಆಟವಾಡಿದ ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಒಳಗೊಂಡ 69 ರನ್ ಗಳಿಸಿದರು.

ಶಿಖರ್ ಧವನ್ 28, ಯುವರಾಜ್ ಸಿಂಗ್ 38, ಬೆನ್ ಕಟಿಂಗ್ 39 ರನ್ ಗಳಿಸಿದರು. ಆರ್.ಸಿ.ಬಿ. ಪರವಾಗಿ ಕ್ರಿಸ್ ಗೇಲ್ 76, ವಿರಾಟ್ ಕೊಹ್ಲಿ 54 ಗಳಿಸಿದರು. ಆರ್.ಸಿ.ಬಿ. ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿನ ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣವಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...