alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಜಾಬ್ ತಂಡದಲ್ಲಿರ್ತಾರೆ ಬಿಕರಿಯಾಗದ ಈ ಆಟಗಾರ

isantt-t

ಇಂದೋರ್: ವರ್ಣರಂಜಿತ ಐ.ಪಿ.ಎಲ್. ಟೂರ್ನಿ ಏಪ್ರಿಲ್ 5 ರಂದು ಹೈದರಾಬಾದ್ ನಲ್ಲಿ ಉದ್ಘಾಟನೆಯಾಗಲಿದೆ.

10 ನೇ ಆವೃತ್ತಿಯ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದ ಟೀಂ ಇಂಡಿಯಾ ಬೌಲರ್ ಇಶಾಂತ್ ಶರ್ಮ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ವೀರೇಂದರ್ ಸೆಹ್ವಾಗ್ ಅವರು, ಇಶಾಂತ್ ರನ್ನು ಸೇರಿಸಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.

ತಂಡಕ್ಕೆ ವೇಗದ ಬೌಲರ್ ಅವಶ್ಯಕತೆ ಇರುವುದನ್ನು ಮನಗಂಡು ಇಶಾಂತ್ ಅವರಿಗೆ ಮಣೆ ಹಾಕಲಾಗಿದೆ.

2 ಕೋಟಿ ರೂ.ಗೆ ಇಶಾಂತ್ ಹರಾಜಿಗಿದ್ದರೂ ಅವರನ್ನು ಯಾವ ಫ್ರಾಂಚೈಸಿ ತಂಡ ಖರೀದಿಸಿರಲಿಲ್ಲ. ಈ ಹಿಂದೆ ಇಶಾಂತ್ ಶರ್ಮ ಕೋಲ್ಕತಾ ನೈಟ್ ರೈಡರ್ಸ್, ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಈಗ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...