alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಭೇಟಿ ಕುರಿತು ಮಹಿಳಾ ಕ್ರಿಕೆಟರ್ ಹೇಳಿದ್ದೇನು…?

ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ದಕ್ಷಿಣ ಅಫ್ರಿಕಾ ವಿರುದ್ದದ ಮೊದಲ ಎರಡು ಟೆಸ್ಟ್ ಪಂದ್ಯದಲ್ಲಿ ಪರಾಭವಗೊಂಡು ಸರಣಿ ಕೈಚೆಲ್ಲಿದೆ. ಇಂದು ಮೂರನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದು, ಈ ಪಂದ್ಯವನ್ನಾದರೂ ಗೆಲ್ಲಬೇಕೆಂಬ ತವಕದಲ್ಲಿದೆ.

ಈ ಮಧ್ಯೆ ಭಾರತದ ಮಹಿಳಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುತ್ತಿದ್ದು, 3 ಏಕ ದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ. ಮಹಿಳಾ ತಂಡ ದಕ್ಷಿಣ ಅಫ್ರಿಕಾಕ್ಕೆ ತೆರಳುವ ಮುನ್ನ ಕ್ರಿಕೆಟ್ ದಂತಕತೆ ಸಚಿನ್ ರವರನ್ನು ಭೇಟಿಯಾಗಿದ್ದು, ಅವರಿಂದ ಸಲಹೆ-ಸೂಚನೆಗಳನ್ನು ಪಡೆದಿದ್ದಾರೆ.

ಸಚಿನ್ ಜೊತೆಗಿನ ಭೇಟಿ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಸಚಿನ್ ರಂತಹ ಹಿರಿಯ ಅನುಭವಿ ಆಟಗಾರರು ನೀಡಿರುವ ಸಲಹೆ ತಂಡಕ್ಕೆ ಸ್ಫೂರ್ತಿ ತಂದಿದೆ. ವಿದೇಶಿ ನೆಲದಲ್ಲಿ ಯಾವ ರೀತಿ ಆಡಬೇಕೆಂಬುದರ ಕುರಿತು ಸಚಿನ್ ಉಪಯುಕ್ತ ಮಾಹಿತಿ ನೀಡಿದ್ದಾರೆಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...