alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ಪ್ರವಾಸದಲ್ಲಿ ಮತ್ತೆ ಒಂದಾಗಿ ಕಾಣಿಸಲ್ಲ ಅನುಷ್ಕಾ-ಕೊಹ್ಲಿ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದೆ. ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೋಲುಂಡಿರುವ ಭಾರತಕ್ಕೆ ಟೆಸ್ಟ್ ಸರಣಿ ಗೆಲುವು ಬಹುಮುಖ್ಯವಾಗಿದೆ. ಇದನ್ನು ಬಿಸಿಸಿಐ ಗಂಭಿರವಾಗಿ ಪರಿಗಣಿಸಿದೆ. ಟೆಸ್ಟ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಜಾರಿಗೊಳಿಸಿರುವ ನಿಯಮ ಬಿಸಿಸಿಐ ಟೆಸ್ಟ್ ಸರಣಿಯನ್ನು ಗಂಭಿರವಾಗಿ ಪರಿಗಣಿಸಿದೆ ಎನ್ನುವುದಕ್ಕೆ ಉತ್ತಮ ನಿದರ್ಶನ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು, ಪತ್ನಿ ಅಥವಾ ಪ್ರೇಯಸಿಯನ್ನು ಭೇಟಿಯಾಗುವಂತಿಲ್ಲ. ಮೂರು ಟೆಸ್ಟ್ ಪಂದ್ಯ ಮುಗಿಯುವವರೆಗೂ ಪ್ರೇಯಸಿ ಅಥವಾ ಪತ್ನಿಗೆ ಕ್ಯಾಂಪ್ ನಲ್ಲಿ ಪ್ರವೇಶವಿಲ್ಲವೆಂಬ ಸೂಚನೆ ಹೊರಬಿದ್ದಿದೆ. ಆಟಗಾರರು ಟೆಸ್ಟ್ ಗೆ ಸಿದ್ಧವಾಗುವ ಅಗತ್ಯವಿದೆ. ಹಾಗಾಗಿ ಕೆಲ ಆಟಗಾರರ ಪತ್ನಿ ಹಾಗೂ ಪ್ರೇಯಸಿಯರಿಗೆ ಜಾಗ ಬಿಡುವಂತೆ ಸೂಚನೆ ನೀಡಲಾಗಿದೆಯಂತೆ.

ಏಕದಿನ ಪಂದ್ಯದ ನಂತ್ರ ಸಾಮಾಜಿಕ ಜಾಲತಾಣದಲ್ಲಿ ಆಟಗಾರರ ಫೋಟೋಗಳು ಹರಿದಾಡುತ್ತಿದ್ದವು. ಆಟಗಾರರು ತಮ್ಮ ಪತ್ನಿ ಅಥವಾ ಸ್ನೇಹಿತೆ ಜೊತೆ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದರು. ಆಟಗಾರರು ತರಬೇತಿ ಪಡೆಯುತ್ತಿದ್ದಾರಾ ಇಲ್ಲ ಪ್ರವಾಸಕ್ಕೆ ತೆರಳಿದ್ದಾರಾ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಕಾಡಿತ್ತು. ಏಕದಿನ ಸರಣಿ ನಂತ್ರ ನಾಲ್ಕು ದಿನ ವಿಶ್ರಾಂತಿಗೆ ಅವಕಾಶವಿತ್ತು. ಅದು ಮುಗಿದಿದೆ. ಸೋಮವಾರದಿಂದ ಆಟಗಾರರು ತರಬೇತಿ ಶುರು ಮಾಡಿದ್ದಾರೆಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...