alex Certify
ಕನ್ನಡ ದುನಿಯಾ       Mobile App
       

Kannada Duniya

ಊಟಕ್ಕೂ ಪರದಾಡುತ್ತಿದ್ದಾರೆ ಈ ಕ್ರಿಕೆಟಿಗರು

indias-under-19-cricketers-relying-on-money-sent-by-parents-to-meet-daily-expensesಇತರೆ ಕ್ರೀಡೆಗಳಿಗೆ ಹೋಲಿಸಿದರೆ ಭಾರತದಲ್ಲಿ ಕ್ರಿಕೆಟ್ ಅತಿ ಹೆಚ್ಚು ಜನಪ್ರಿಯತೆ ಪಡೆದಿದೆ. ಹೀಗಾಗಿ ಕ್ರಿಕೆಟ್ ನಲ್ಲಿ ಹಣದ ಹೊಳೆಯೇ ಹರಿದುಬರುತ್ತದೆ. ಈ ಕಾರಣದಿಂದಲೇ ಬಿಸಿಸಿಐ ಅತ್ಯಂತ ಶ್ರೀಮಂತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಿದ್ದರೂ ಭಾರತದ ಅಂಡರ್ 19 ಕ್ರಿಕೆಟ್ ತಂಡ ಊಟಕ್ಕೆ ಹಣವಿಲ್ಲದೆ ಪರದಾಡುತ್ತಿದೆ ಎಂದರೆ ನೀವು ನಂಬಲೇಬೇಕು.

ಹೌದು, ಸದ್ಯ ಅಂಡರ್ 19 ತಂಡ ಮುಂಬೈನ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ತಂಗಿದೆ. ಬಿಸಿಸಿಐ, ಆಟಗಾರರ ವೆಚ್ಚವನ್ನು ಭರಿಸುತ್ತಿತ್ತಾದರೂ ಇದೀಗ ಬಿಸಿಸಿಐ ನಲ್ಲಿ ಉದ್ಬವಿಸಿರುವ ಪರಿಸ್ಥಿತಿಯ ಕಾರಣಕ್ಕೆ ಆಟಗಾರರಿಗೆ ಸಕಾಲಕ್ಕೆ ಹಣ ದೊರೆಯುತ್ತಿಲ್ಲ.

ಸುಪ್ರೀಂ ಕೋರ್ಟ್ ಆದೇಶದಂತೆ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಬಿಸಿಸಿಐ ನಲ್ಲಿ ಈಗ ಸಹ ಕಾರ್ಯದರ್ಶಿ ಅಮಿತಾಬ್ ಚೌಧರಿ ಹಾಗೂ ಖಜಾಂಚಿ ಅನಿರುದ್ದ್ ಚೌಧರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕಾರ್ಯದರ್ಶಿಗಳ ಸಹಿ ಇಲ್ಲದೆ ಚೆಕ್ ಮಾನ್ಯವಾಗುವುದಿಲ್ಲ. ಈ ನಿಯಮ ಬದಲಾಗಬೇಕೆಂದರೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ನೂತನ ಸಮಿತಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಅಲ್ಲಿಯವರೆಗೂ ಆಟಗಾರರ ದೈನಂದಿನ ವೆಚ್ಚಕ್ಕೆ ಹಣ ಸಿಗುವುದು ಕಷ್ಟವಾಗಲಿದೆ. ಹೀಗಾಗಿ ಅಂಡರ್ 19 ಆಟಗಾರರು ತಮ್ಮ ಪೋಷಕರಿಂದ ಹಣ ಪಡೆದು ದಿನ ದೂಡುತ್ತಿದ್ದಾರೆನ್ನಲಾಗಿದೆ. ಅವರುಗಳು ತಂಗಿರುವ ಐಷಾರಾಮಿ ಹೋಟೆಲ್ ನಲ್ಲಿ ಸ್ಯಾಂಡ್ ವಿಚ್ ಗೇ 1,500 ರೂ. ಗಳೆಂದು ಹೇಳಲಾಗಿದ್ದು, ಹೀಗಾಗಿ ಕೆಲ ಆಟಗಾರರು ಊಟಕ್ಕಾಗಿ ತಮ್ಮ ಬಜೆಟ್ ಗೆ ಹೊಂದುವ ಹೋಟೆಲ್ ಗಳತ್ತ ಮುಖ ಮಾಡುತ್ತಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...