alex Certify
ಕನ್ನಡ ದುನಿಯಾ       Mobile App
       

Kannada Duniya

ಆಂಗ್ಲರ ನೆಲದಲ್ಲಿ ದಾಖಲೆ ಬರೆದ ಸ್ಮೃತಿ ಮಂದಣ್ಣ

ಭಾರತದ ಯುವ ಬ್ಯಾಟ್ಸ್ ಮನ್ ಸ್ಮೃತಿ ಮಂದಣ್ಣ ವನಿತೆಯರ ಟಿ-20 ಕ್ರಿಕೆಟ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಕೆಐಎ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ 18 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ.

ಮಳೆಯಿಂದ ಓವರ್ ಗಳಿಗೆ ಕಡಿತ ಬಿದ್ದ ಪಂದ್ಯದಲ್ಲಿ, ಭಾರತೀಯ ಪ್ಲೇಯರ್ ಈ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಸ್ಮೃತಿ ಮಂದಣ್ಣ ಕೇವಲ 18 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಒಟ್ಟಾರೆಯಾಗಿ ಸ್ಮೃತಿ 25 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 52 ರನ್ ಬಾರಿಸಿ ಅಬ್ಬರಿಸಿದ್ರು.

ಇಂಗ್ಲೀಷ್ ಪ್ರೀಮಿಯರ್ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸ್ಮೃತಿ ಮಂದಣ್ಣ ಭಾನುವಾರ ನಡೆದ ಲಾಂಗ್ಬೊರಗ್ ವಿರುದ್ಧ ಈ ಸಾಧನೆ ಮಾಡಿದರು. ಮಂದಣ್ಣ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ವೆಸ್ಟರ್ನ್ಸ್ಟ್ರೋಮ್ ತಂಡ 2 ವಿಕೆಟ್ ಗೆ 82 ರನ್ ಕಲೆ ಹಾಕಿತು.

ನ್ಯೂಜಿಲೆಂಡ್ ನ ಸೋಫಿಯಾ ಡಿವೈನ್ 2005 ರಲ್ಲಿ ಬೆಂಗಳೂರಿನಲ್ಲಿ ಭಾರತದ ವಿರುದ್ಧ 18 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ದ ದಾಖಲೆಯನ್ನು ಸ್ಮೃತಿ ಮಂದಣ್ಣ ಸರಿಗಟ್ಟಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...