alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಅಪರೂಪದ ಪ್ರತಿಭೆಯ ಸಾಧನೆ ಕೇಳಿದ್ರೆ ಬೆರಗಾಗ್ತೀರಾ…!

ಆತನ ಹೆಸರು ರಾಜೇಶ್ ಕುಮಾರ್ ಕಸಾನಾ. ಆತ ಭಾರತದ ಪ್ರತಿಭಾನ್ವಿತ ಲೈಟ್ ವೈಟರ್. ಉದ್ಯೋಗ; ಚಹಾದಂಗಡಿಯಲ್ಲಿ ಚಹಾ ಮಾಡಿ ಮಾರುವುದು.

ಆತನ ದಿನಚರಿ ಹೀಗೆ ಆರಂಭವಾಗುತ್ತದೆ….ಬೆಳಿಗ್ಗೆ 5ಕ್ಕೆ ಎದ್ದು ಚಹಾದಂಗಡಿ ತೆರೆಯುತ್ತಾನೆ. ಮಧ್ಯಾಹ್ನ 1 ಗಂಟೆಯವರೆಗೆ ನಡೆಸಿ, ಬಳಿಕ ಸಹೋದರನಿಗೆ ಹಸ್ತಾಂತರಿಸಿ ಊಟ ಮುಗಿಸಿ ವಿಶ್ರಮಿಸಿ ಸಂಜೆ ಆರರಿಂದ ಬಾಕ್ಸಿಂಗ್ ಅಭ್ಯಾಸಕ್ಕೆ ತೆರಳುತ್ತಾನೆ.

“10 ರೂಪಾಯಿಗೆ ಒಂದು ಚಹಾ ಮತ್ತು ಒಂದಷ್ಟು ತಿನಿಸುಗಳನ್ನು ಮಾರಿ ಜೀವನ ನಡೆಸುತ್ತಿದ್ದೇನೆ” ಎನ್ನುವ ರಾಜೇಶ್ ಗೆ ತಾನು ಎಷ್ಟು ದೊಡ್ಡ ಸಾಧನೆ ಮಾಡಿದ್ದೇನೆ ಎಂಬುದರ ಅರಿವಿಲ್ಲ.

ನಾನು ಬಾಕ್ಸರ್ ಆಗುವುದು ನನ್ನ ತಂದೆಯ ಕನಸಾಗಿತ್ತು. ಅದನ್ನು ನಾನು ಈಡೇರಿಸಲೇ ಬೇಕು ಎಂಬ ಹಠದಿಂದ ಮಾತನಾಡುವ ರಾಜೇಶ್ ಗೆ ಮೊದಲ ವೇದಿಕೆ ಸಿಕ್ಕಿದ್ದು 2015ರಲ್ಲಿ. ಈವರೆಗೆ 10 ಪಂದ್ಯಗಳಲ್ಲಿ ಪಾಲ್ಗೊಂಡಿರುವ ರಾಜೇಶ್ 9ರಲ್ಲಿ ವಿಜೇತರಾಗಿದ್ದರೆ 1 ಡ್ರಾದಲ್ಲಿ ಅಂತ್ಯಗೊಂಡಿದೆ. ಈವರೆಗೆ ಸೋಲು ಕಾಣದ ರಾಜೇಶ್ ವೃತ್ತಿಪರ ಬಾಕ್ಸರ್ ಗಳ ಪೈಕಿ ಉತ್ತಮ ಸ್ಥಾನದಲ್ಲಿದ್ದು, ವಿಶ್ವ ಪ್ರೊಫೆಶನಲ್ ಬಾಕ್ಸಿಂಗ್ ರ್ಯಾಂಕಿಂಗ್ ನಲ್ಲಿ 221 ನೇ ಸ್ಥಾನದಲ್ಲಿದ್ದಾರೆ.

24ರ ಹರೆಯದ ರಾಜೇಶ್ ಶಾಲಾ ದಿನಗಳಲ್ಲೇ ತಂದೆಯನ್ನು ಬಳಿಕ ತಂಗಿಯನ್ನೂ ಕಳೆದುಕೊಂಡಿದ್ದರು. ನನ್ನೆಲ್ಲಾ ಸಾಧನೆಗಳಿಗೆ ಒಲಿಂಪಿಕ್ ನಲ್ಲಿ ಕಂಚು ವಿಜೇತ ವಿಜೇಂದರ್ ಸಿಂಗ್ ಅವರೇ ಸ್ಫೂರ್ತಿ ಎನ್ನುವ ರಾಜೇಶ್, ವಿಜೇಂದರ್ ಅವರನ್ನು ಭೇಟಿಯಾಗಬೇಕೆಂಬುದು ನನ್ನ ಕನಸು. ಅವರನ್ನೇ ಮಾದರಿಯಾಗಿಟ್ಟುಕೊಂಡು ನಾನು ಅಭ್ಯಾಸ ನಡೆಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...