alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿಭಾ ಶೋಧಕ್ಕೆ ಮುಂದಾದ ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಯುವ ಪ್ರತಿಭೆಗಳನ್ನು ಹುಡುಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸಚಿನ್, ಮಿಡ್ಲ್ಸೆಕ್ಸ್ ಕೌಂಟಿ ತಂಡದ ಜೊತೆ ಕೈ ಜೋಡಿಸಿ ಕ್ರಿಕೆಟ್ ಅಕಾಡೆಮಿ ತೆರೆಯಲಿದ್ದಾರೆ.

‘ತೆಂಡೂಲ್ಕರ್ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿ’ ಎಂಬ ಹೆಸರಿನಲ್ಲಿ ಸಂಸ್ಥೆ ಆರಂಭವಾಗಲಿದೆ. 9 ವರ್ಷದಿಂದ 14 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರು ಸಂಸ್ಥೆಯಲ್ಲಿ ಕ್ರಿಕೆಟ್ ವ್ಯಾಕರಣ ಕಲಿಯಬಹುದಾಗಿದೆ.

ಈ ಆಕಾಡೆಮಿಯ ಮೊದಲ ಶಿಬಿರ ಆಗಸ್ಟ್ 6 ರಿಂದ 9 ರವರೆಗೆ ನಾರ್ಥ್ ವುಡ್ನಲ್ಲಿರುವ ಮರ್ಚೆಂಟ್ ಟೇಲರ್ಸ್ ಸ್ಕೂಲ್ ನಲ್ಲಿ ನಡೆಯಲಿದೆ. ತದ ನಂತರ ಮುಂಬೈ ಹಾಗೂ ಲಂಡನ್ ನಲ್ಲೂ ಶಿಬಿರ ನಡೆಯಲಿದೆ. ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಹಾಗೂ ಮಿಡ್ಲ್ಸೆಕ್ಸ್ ಸಹಯೋಗದಿಂದ ‘ತೆಂಡೂಲ್ಕರ್ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿ’ ಕಾರ್ಯ ನಿರ್ವಹಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...